ತಿರುವನಂತಪುರ: ತಿರುವನಂತಪುರ ನಿವಾಸಿಯಾಗಿರುವ ಯುವತಿಗೆ ಮದುವೆ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿದ ಪರಿಣಾಮ ಗರ್ಭಿಣಿಯಾದ ಆಕೆಯನ್ನು ಗರ್ಭಛಿದ್ರಗೊಳಪಡಿಸಿರುವುದಾಗಿ ಆರೋಪಿಸಿ ನೀಡಿದ ದೂರಿನಂತೆ ಯೂತ್ ಕಾಂಗ್ರೆಸ್ ಮಾಜಿ ರಾಜ್ಯ ಅಧ್ಯಕ್ಷರೂ, ಪಾಲಕ್ಕಾಡ್ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ರಾಹುಲ್ ಮಾಂಕೂಟತ್ತಿಲ್ (36) ವಿರುದ್ಧ ತಿರುವನಂತಪುರ ನೆಡುಮಂ ಙಾಡ್ ವಲಿಯಮಲ ಪೊಲೀಸರು ಜಾಮೀನುರಹಿತ ಕೇಸುದಾಖಲಿಸಿ ಕೊಂಡಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 89ರ ಪ್ರಕಾರ ಈ ಪ್ರಕರಣ ದಾಖಲಿಸಲಾಗಿದ್ದು, ಇದು 10 ವರ್ಷ ಸಜೆ ಲಭಿಸುವ ಅಪರಾಧಕೃತ್ಯವಾಗಿದೆ. ಇದರ ಹೊರತಾಗಿ ಗರ್ಭಛಿದ್ರ ಗೊಳಿಸಲು ರಾಹುಲ್ ಮಾಂಕೂಟ ತ್ತಿಲ್‌ರ ನಿರ್ದೇಶ ಪ್ರಕಾರ ಯುವತಿಗೆ ಮಾತ್ರೆಗಳನ್ನು ನೀಡಿದ ರಾಹುಲ್‌ರ ಸ್ನೇಹಿತ ಅಡೂರು ನಿವಾಸಿಯಾದ ವ್ಯಾಪಾರಿ ಜೋಬಿ ಜೋಸೆಫ್ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಎಫ್‌ಐಆರ್ ದಾಖಲಿಸಿಕೊಂಡ ಬೆನ್ನಲ್ಲೇ ರಾಹುಲ್ ಮಾಂಕೂಟತ್ತಿಲ್ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ನಿನ್ನೆ ಸಂಜೆಯಿಂದ ಅಪ್ರತ್ಯಕ್ಷನಾಗಿದ್ದಾರೆ. ಇದರ ಜೊತೆಗೆ ಅವರು ನಿರೀಕ್ಷಣಾ ಜಾಮೀನಿಗಾಗಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಪ್ರಯತ್ನದಲ್ಲಿ ತೊಡಗಿ ದ್ದಾರೆಂದು ತಿಳಿದುಬಂದಿದೆ. ಅರ್ಜಿ ಸಲ್ಲಿಸುವ ಮೊದಲು ಅವರನ್ನು ಬಂಧಿಸುವ ಪ್ರಯತ್ನದಲ್ಲಿ ಪೊಲೀಸರು ಇನ್ನೊಂದೆಡೆ ತೊಡಗಿದ್ದಾರೆ. ತಿರುವ ನಂಪುರ ವಲಯಮಲೆ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದರೂ ಘಟನೆ ನಡೆದಿರುವುದು ನೇಮಂ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶವಾಗಿರುವುದರಿಂದ ಪ್ರಕರಣವನ್ನು ನಂತರ ಅಲ್ಲಿಗೆ ವರ್ಗಾಯಿಸಲಾಗಿದೆ.
ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ ನಿನ್ನೆ ನೇರವಾಗಿ ಮುಖ್ಯಮಂತ್ರಿಯ ಕಚೇರಿಗೆ ತಲುಪಿ ದೂರು ನೀಡಿದ್ದಳು. ಮಾತ್ರವಲ್ಲ ರಾಹುಲ ನಡೆಸಿದ ವಾಟ್ಸಪ್ ಚಾಟ್‌ಗಳೂ ಸೇರಿದಂತೆ ಹಲವು ಡಿಜಿಟಲ್ ಪುರಾವೆಗಳನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಿದ್ದಾಳೆ. ಅದರಂತೆ ಪೊಲೀಸರು ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ವೇಳೆಯಲ್ಲೇ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಕಾಂಗ್ರೆಸ್‌ಗೆ ರಾಹುದೋಷ ಆವರಿಸುವಂತೆ ಮಾಡಿದೆ. ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ರಾಹುಲ್‌ರನ್ನು ಈ ಹಿಂದೆಯೇ ಕಾಂಗ್ರೆಸ್‌ನಿಂದ ವಜಾಗೈಯ್ಯಲಾಗಿ ತ್ತಾದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಈ ತನಕ ಪಕ್ಷ ನಿರ್ದೇಶ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ರಾಹುಲ್ ಈಗಲೂ ಶಾಸಕನಾಗಿ ಮುಂದುವರಿ ಯುತ್ತಿದ್ದಾರೆ. ಈಗ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಹುಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಒತ್ತಡವೂ ಉಂಟಾಗಿದೆ. ರಾಹುಲ್ ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಮತ್ತು ಎಡರಂಗ ಪ್ರತ್ಯಕ್ಷವಾಗಿ ರಂಗಕ್ಕಿಳಿದಿದೆ.







