ಧರ್ಮಸ್ಥಳ ಸಹಿತ ಕ್ಷೇತ್ರಗಳ ನಕಲಿ ಆರೋಪದ ಹಿಂದೆ ಗೂಢಾಲೋಚನೆ- ಬಾಬುರಾಜ್

ಬದಿಯಡ್ಕ: ಹಿಂದೂ ಸಂಸ್ಕೃತಿಯನ್ನು ಹಾಳು ಮಾಡುವ ಉದ್ದೇಶದಿಂದ ಧರ್ಮಸ್ಥಳ ಸಹಿತ ಕ್ಷೇತ್ರಗಳ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದರ ಹಿಂದೆ ದೊಡ್ಡ ಗೂಢಾಲೋಚನೆ ಇದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುರಾಜ್ ನುಡಿದರು. ಕುಂಬ್ಡಾಜೆ ಪಂಚಾಯತ್ ಅಗಲ್ಪಾಡಿ ವಾರ್ಡ್ ಸಮಾವೇಶವನ್ನು ಪಡುಮೂಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸುಳ್ಳು ದೂರು ಆರೋಪ ಹೊರಿಸಿದ್ದು, ಈ ಹಿಂದೆ ಶಬರಿಮಲೆಯಲ್ಲೂ ಇದೇ ರೀತಿಯಲ್ಲಿ ಗಲಭೆ ಸೃಷ್ಟಿಸಿ ಹಿಂದುಗಳ ಧಾರ್ಮಿಕ ಭಾವನೆಯನ್ನು ಹಾಳುಗೆಡಹುವ ಕೆಲಸ ಮಾಡಿದ್ದಾರೆ. ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕೇರಳದಾದ್ಯಂತ ಬಿಜೆಪಿ ಹೆಚ್ಚು ಸೀಟು ಪಡೆಯುವಂತೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಅವರು ನುಡಿದರು.

ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದರು. ವಾರ್ಡ್ ಪ್ರತಿನಿಧಿ ಮೀನಾಕ್ಷಿ ಎಸ್. ವರದಿ ಮಂಡಿಸಿದರು. ಈ ವೇಳೆ ಹಿರಿಯ ಬಿಜೆಪಿ ನೇತಾರ ಹರ್ಷ ಕುಣಿಕುಳ್ಳಾಯ, ವಾರ್ಡ್ ಪ್ರತಿನಿಧಿ ಮೀನಾಕ್ಷಿ ಎಸ್.ರನ್ನು ಗೌರವಿಸಲಾಯಿತು.  ವಿದ್ಯಾಲಕ್ಷ್ಮಿ ರಾಷ್ಟ್ರಗೀತೆ ಹಾಡಿದರು. ರಾಘವೇಂದ್ರ ಮೈಲ್ತೊಟ್ಟಿ ಸ್ವಾಗತಿಸಿ, ಅನು ಕುರುಪ್ ವಂದಿಸಿದರು. ವಾರ್ಡ್ ಸಂಚಾಲಕ ಅಂಬುಜಾಕ್ಷ ನಡುಮೂಲೆ ಉಪಸ್ಥಿತರಿದ್ದರು. ಶಿವಾನಂದ ನಡುಮೂಲೆ ನಿರೂಪಿಸಿದರು.

You cannot copy contents of this page