ಬಂದ್ಯೋಡು: ಸಿಪಿಎಂ ಬಂದ್ಯೋಡು ಲೋಕಲ್ ಸಮಿತಿ ಕಾರ್ಯದರ್ಶಿ ಹನೀಫ್ ಶಿರಿಯರಿಗೆ ಪಕ್ಷದ ಏರಿಯಾ ಸಮಿತಿ ವತಿಯಿಂದ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸಮಿತಿ ರೂಪೀಕರಣ ಸಭೆ ಕೈಕಂಬದ ಸಾಗರ್ ಸಭಾಂಗಣದಲ್ಲಿ ಜರಗಿತು. ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಸಿ.ಎಚ್. ಕುಂಞಂಬು ಉದ್ಘಾಟಿಸಿದರು.
ಏರಿಯಾ ಸಮಿತಿ ಸದಸ್ಯ ಚಂದ್ರ ನಾಯ್ಕ್ ಮಾನಿಪ್ಪಾಡಿ, ಹಾರೀಸ್ ಪೈವಳಿಕೆ, ಪ್ರಶಾಂತ ಕನಿಲ, ಕರುಣಾಕರ ಶೆಟ್ಟಿ, ಸಾದಿಕ್ ಚೆರುಗೋಳಿ, ನವೀನ, ರಾಮಚಂದ್ರ ಟಿ. ಸಹಿತ ಹಲವಾರು ಮಂದಿ ಭಾಗವಹಿಸಿದರು. ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಸಿಜಿ ಮ್ಯಾಥ್ಯು, ಸಂಚಾಲಕರಾಗಿ ಅಬ್ದುಲ್ ರಜಾಕ್ ಚಿಪ್ಪಾರುರನ್ನು ಆಯ್ಕೆ ಮಾಡಲಾಯಿತು. ಏರಿಯಾ ಕಾರ್ಯದರ್ಶಿ ಸಿಜಿ ಮ್ಯಾಥ್ಯು ಸ್ವಾಗತಿಸಿದರು.





