ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಗ್ರಹಪಟ್ಟಿರುವುದಾಗಿ ಆರೋಪಿಸಿ ರಾಜ್ಯ ಅಧ್ಯಕ್ಷರಿಗೆ ದೂರು|ಕಾಸರಗೋಡು: ಕಾಂಗ್ರೆಸ್ನ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಂಸದರೂ ಆಗಿದ್ದ ದಿ| ಐ. ರಾಮ ರೈ ಹಾಗೂ ಕಾಂಗ್ರೆಸ್ನ ಹಿರಿಯ ನೇತಾರ ದಿ| ಪಿ. ಗಂಗಾಧರನ್ ನಾಯರ್ರ ಸ್ಮಾರಕ ನಿರ್ಮಿಸುವ ಹೆಸರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ತಮ್ಮಿಂದ ಹಣ ಕೇಳಿರುವುದಾಗಿ ಆರೋಪಿಸಿ ರಾಮ ರೈ ಅವರ ಪುತ್ರ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಸುಬ್ಬಯ್ಯ ರೈ ಹಾಗೂ ಪಿ. ಗಂಗಾಧರನ್ ನಾಯರ್ರ ಪುತ್ರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧನ್ಯಾಸುರೇಶ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಸನ್ನಿ ಜೋಸೆಫ್ರಿಗೆ ದೂರು ಸಲ್ಲಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡದ ಮೇಲ್ಗಡೆ ರಾಮ ರೈ ಮತ್ತು ಗಂಗಾಧರನ್ ನಾಯರ್ರ ಸ್ಮರಣಾರ್ಥ ಸಭಾಂಗಣ ಹಾಗೂ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಕುಂಞಿಕಣ್ಣನ್ರ ಹೆಸರಲ್ಲಿ ಇದೇ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಸ್ಮಾರಕ ಸಭಾಂಗಣ ನಿರ್ಮಿಸುವ ಯೋಜನೆಯನ್ನು ಜಿಲ್ಲಾ ಕಾಂಗ್ರೆಸ್ ನೇತೃತ್ವ ಹಾಕಿಕೊಂಡಿದೆ. ಈ ಕಟ್ಟಡದ ಪ್ರಧಾನ ಸಭಾಂಗಣವನ್ನು ರಾಮ ರೈಯವರ ಹೆಸರಲ್ಲಿ ನಿರ್ಮಿಸಲಾಗುವುದೆಂದು ಪಿ.ಕೆ. ಫೈಸಲ್ ತಮ್ಮಲ್ಲಿ ತಿಳಿಸಿ ಅದಕ್ಕಾಗಿ ಅವರು ನನ್ನಿಂದ 20 ಲಕ್ಷ ರೂ. ಆಗ್ರಹಪಟ್ಟಿದ್ದರೆಂದು ಸುಬ್ಬಯ್ಯ ರೈ ಹಾಗೂ ನನ್ನಿಂದಲೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಣ ಕೇಳಿದ್ದರೆಂದು ಧನ್ಯಾಸುರೇಶ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ವರ್ಷಗಳ ತನಕ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ, 1984ರಲ್ಲಿ ಕಾಸರಗೋಡಿನ ಸಂಸದರಾಗಿಯೂ ಸೇವೆ ಸಲ್ಲಿಸಿದ್ದ ಹಿರಿಯರಾಗಿದ್ದ ಐ. ರಾಮ ರೈಯವರು 2010ರಲ್ಲಿ ನಿಧನಹೊಂದಿದ್ದರು. ದೀರ್ಘ ಕಾಲ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ 1984ರಿಂದ 2018ರ ತನಕ ಯುಡಿಎಫ್ನ ಜಿಲ್ಲಾ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದ ಕಾಂಗ್ರೆಸ್ನ ಇನ್ನೋರ್ವ ಹಿರಿಯ ನೇತಾರ ನಾಗಿದ್ದ ಪಿ. ಗಂಗಾಧರನ್ ನಾಯರ್ 2020ರಲ್ಲಿ ನಿಧನಹೊಂದಿದರು.
ಐ. ರಾಮ ರೈ ಮತ್ತು ಪಿ. ಗಂಗಾಧರನ್ ನಾಯರ್ರ ಸ್ಮಾರಕ ಸಭಾಂಗಣದ ಹೆಸರಲ್ಲಿ ಹಣ ಕೇಳಿದ್ದೇ ಆಗಿದ್ದಲ್ಲಿ ಅದು ಅಕ್ಷಮ್ಯ ರೀತಿಯ ತಪ್ಪು ಆಗಿದೆಯೆಂದು ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯವನ್ನು ನಾನು ಕಾಂಗ್ರೆಸ್ ರಾಜ್ಯ ನೇತೃತ್ವದ ಗಮನಕ್ಕೆ ತರುವುದಾಗಿಯೂ ಅವರು ಹೇಳಿದ್ದಾರೆ.
ಆರೋಪಗಳು ಆಧಾರರಹಿತ-ಪಿ.ಕೆ. ಫೈಸಲ್
ಐ. ರಾಮ ರೈ ಮತ್ತು ಪಿ. ಗಂಗಾಧರನ್ ನಾಯರ್ರ ಸ್ಮಾರಕ ನಿರ್ಮಾಣದ ಹೆಸರಲ್ಲಿ ನನ್ನ ಮೇಲೆ ಹೊರಿಸಲಾಗಿರುವ ಆರೋಪಗಳೆಲ್ಲವೂ ಆಧಾರರಹಿತ ಹಾಗೂ ಯಾವುದೇ ರೀತಿಯ ಹುರುಳಿಲ್ಲದ್ದೆಂದು ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಕೆ. ಫೈಸಲ್ ಇದಕ್ಕೆ ಸ್ಪಷ್ಟೀಕರಣೆ ನೀಡಿದ್ದಾರೆ. ನನ್ನ ಚಾರಿತ್ರ್ಯ ಹನನ ನಡೆಸಲು ಕೆಲವರು ಉದ್ದೇಶಪೂರ್ವಕವಾಗಿ ನಡೆಸುವ ಯತ್ನಗಳಾಗಿವೆ ಇವು. ನಾನು ಯಾರಿಂದಲೂ ಹಣ ಕೇಳಿಲ್ಲವೆಂದೂ ಅವರು ತಿಳಿಸಿದ್ದಾರೆ.






