ವ್ಯಕ್ತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ಕೊಳವೆ ಬಾವಿ ನಿರ್ಮಾಣ: ಪಂ. ಸದಸ್ಯನ ನೇತೃತ್ವದಲ್ಲಿ ತಡೆ

ಉಪ್ಪಳ: ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ಹೊತ್ತಲ್ಲಿ ವ್ಯಕ್ತಿಯೋರ್ವರು ಕೊಳವೆ ಬಾವಿ ಯನ್ನು ನಿರ್ಮಿಸಲು ಮುಂದಾಗಿದ್ದು ಈ ವೇಳೆ ವಾರ್ಡ್ ಸದಸ್ಯರ ನೇತೃತ್ವದಲ್ಲಿ ಊರವರು ತಡೆದ ಘಟನೆ ಸೋಂಕಾಲಿನಲ್ಲಿ ನಡೆದಿದೆ. ಮಂಗಲ್ಪಾಡಿ ಪಂಚಾಯತ್‌ನ ಸೋಂಕಾಲಿನಲ್ಲಿ ನೂತನವಾಗಿ ನಿರ್ಮಾಣ ಗೊಂಡ ಫ್ಲಾಟ್‌ನ ಮುಂಭಾಗದಲ್ಲಿ ಅನಧಿಕೃತ ವಾಗಿ ನಿನ್ನೆ ರಾತ್ರಿ ಸುಮಾರು 9.30ರ ವೇಳೆ ಕೊಳವೆ ಬಾವಿಯನ್ನು ನಿರ್ಮಿಸಲು ಪ್ರಾರಂಭಿ ಸಲಾಗಿದೆ. ಮಾಹಿತಿ ತಿಳಿದು 7ನೇ ವಾರ್ಡ್ ಸದಸ್ಯ ವಸಂತ ಕುಮಾರ್ ಮಯ್ಯರ ನೇತೃತ್ವ ದಲ್ಲಿ ಊರವರು ತಲುಪಿ ಕಾಮಗಾರಿಯನ್ನು ಮುಂದುವರಿಸದAತೆ ತಡೆದರು. ಸಾರ್ವ ಜನಿಕ ಸ್ಥಳದಲ್ಲಿ ಅನಧಿಕೃತ ಕೊಳವೆ ಬಾವಿ ನಿರ್ಮಾಣದ ಬಗ್ಗೆ ಕುಂಬಳೆ ಪೊಲೀಸರಿಗೆ ವಾರ್ಡ್ ಸದಸ್ಯ ಮಾಹಿತಿ ನೀಡಿದ್ದಾರೆ.

You cannot copy contents of this page