ಪ್ರತಾಪನಗರ ಒಳ ರಸ್ತೆಯಲ್ಲಿ ಚರಂಡಿ, ಸ್ಲ್ಯಾಬ್ ನಿರ್ಮಾಣ: ಸ್ಥಳೀಯರಿಗೆ ನೆಮ್ಮದಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರ ಒಳ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ ಹಾಗೂ ಸ್ಲಾಬ್ ನಿರ್ಮಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ದೂರವಾಗಿದೆ. ಈ ಪರಿಸರದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಶೋಚನೀಯÁವಸ್ಥೆ ಉಂಟಾಗುತ್ತಿತ್ತು. ತೆರೆದ ಸ್ಥಿತಿಯಲ್ಲಿದ್ದ ಚರಂಡಿಯಿAದ ವಾಹನ ಸಂಚಾರಕ್ಕೆ ಸಮಸ್ಯೆ ಹಾಗೂ ಅಪಘಾತಕ್ಕೆ ಕಾರಣವಾಗುತ್ತಿತ್ತು. ಸೂಕ್ತ ಚರಂಡಿ ನಿರ್ಮಾಣಕ್ಕೆ ಈ ಹಿಂದೆ ಊರವರು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಈ ಹಿಂದಿನ ವಾರ್ಡ್ ಸದಸ್ಯೆ ಸುಧಾ ಗಣೇಶ್‌ರ ಮುತುವರ್ಜಿಯಿಂದ ಪಂಚಾಯತ್ ನಿಂದ ಮಂಜೂರುಗೊAಡ ಸುಮಾರು 5ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಇದರ ಗುತ್ತಿಗೆಯನ್ನು ಸಿದ್ದಿಕ್ ಪತ್ವಾಡಿ ವಹಿಸಿಕೊಂಡಿದ್ದು, ಕಾಮಗಾರಿ ವೇಗದಿಂದ ನಡೆಯುತ್ತಿದೆ. ವ್ಯವಸ್ಥಿತ ಚರಂಡಿ ನಿರ್ಮಾಣ ಹಾಗೂ ವಾಹನ ಸಂಚಾರಕ್ಕೆ ಸ್ಥಳವಕಾಶ ಇಲ್ಲದ ಸ್ಥಳ ಹಾಗೂ ಅಪಾಯಕ್ಕೆ ಕಾರಣವಾಗುವಲ್ಲಿ ಸ್ಲಾಬ್‌ನ್ನು ಅಳವಡಿಸಿ ಭದ್ರತೆ ಒದಗಿಸಿದ್ದಾರೆ. ಇದರಿಂದ ಸ್ಥಳೀಯರಲ್ಲಿ ನೆಮ್ಮದಿಯನ್ನುಂಟುಮಾಡಿದೆ. ಈ ಪರಿಸರದಲ್ಲಿ ಚರಂಡಿಯನ್ನು ಪೂರ್ತಿಗೊಳಿಸಿ ಮಳೆ ನೀರು ಸಂಪೂರ್ಣ ಚರಂಡಿಯಲ್ಲಿ ಹರಿಯುವಂತೆ ಮಾಡಲು ವಾರ್ಡ್ ಸದಸ್ಯ ವಸಂತ ಕುಮಾರ್ ಮಯ್ಯರಲ್ಲಿ ಸ್ಥಳೀಯರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page