ಕಾಸರಗೋಡು: ಜಿಲ್ಲೆಯ ಅರಣ್ಯ ಗಡಿ ಪ್ರದೇಶಗಳಲ್ಲಿ ಸೌರ ವಿದ್ಯುತ್ ಚಾಲಿತ ಬೇಲಿಗಳ ನಿರ್ಮಾಣ ಕೆಲಸ ವನ್ನು ಈ ವರ್ಷಗೊಳಗಾಗಿ ಪೂರ್ತೀ ಕರಿಸಿ ಆ ಮೂಲಕ ಕಾಸರ ಗೋಡನ್ನು ಸಂರಕ್ಷಿತ ಜಿಲ್ಲೆಯನ್ನಾಗಿ ಸಲಾಗುವು ದೆಂದು ಅರಣ್ಯ ಖಾತೆ ಸಚಿವ ಎ.ಕೆ. ಶಶೀಂದ್ರನ್ ತಿಳಿಸಿದ್ದಾರೆ. ಮನುಷ್ಯ ವನ್ಯಜೀವಿ ಸಂಘರ್ಷ ಸರಳೀಕರಿಸಲು ರೂಪು ನೀಡಲಾಗಿರುವ ನಿಯಂತ್ರಣ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡು ತ್ತಿದ್ದರು.
ಕೃಷಿ ಭೂಮಿ ಮತ್ತು ಜನವಾಸ ಕೇಂದ್ರಗಳಿಗೆ ನುಗ್ಗಿ ಉಪಟಳ ನೀಡುವ ಕಾಡು ಹಂದಿಗಳನ್ನು ಇತಿಶ್ರೀಗೊಳಿ ಸುವ ಕ್ರಮವನ್ನು ಜಿಲ್ಲೆಯಲ್ಲಿ ಇನ್ನಷ್ಟು ತೀವ್ರಗೊಳಿಸಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಪಂಚಾಯತ್‌ಗಳ ಅಧ್ಯ ಕ್ಷರುಗಳು ಹಾಗೂ ಕಾರ್ಯದರ್ಶಿಗಳ ಸಭೆಯನ್ನು ತುರ್ತಾಗಿ ಕರೆಯ ಲಾಗುವುದು. ಜಿಲ್ಲೆಗೆ ಅರಣ್ಯ ಪ್ರದೇಶಗಳ ಮೂಲಕ ಹಾದು ಹೋಗುವ ವಾಹನಗಳಿಗೆ ಕಾಡುಪ್ರಾಣಿಗಳು ಢಿಕ್ಕಿ ಹೊಡೆದು ಉಂಟಾಗುವ ಅಪಘಾತಗಳನ್ನು ನಿಯಂತ್ರಿಸಲು ಅಗತ್ಯದ ಪ್ರಾಯೋಗಿಕ ಕ್ರಮ ಕೈಗೊಳ್ಳಲಾಗುವುದು. ಜನವಾಸ ಕೇಂದ್ರಗಳಲ್ಲಿ ಪ್ರತ್ಯಕ್ಷಗೊಳ್ಳುವ ಹಾವುಗಳನ್ನು ಸೆರೆ ಹಿಡಿದು, ಅವುಗಳನ್ನು ತಾತ್ಕಾಲಿಕವಾಗಿ ಇರಿಸಲು ಅಗತ್ಯದ ಸೌಕರ್ಯಗಳನ್ನು ಏರ್ಪಡಿಸ ಲಾಗುವುದು. ಅರಣ್ಯಗಳನ್ನು ಮಲಿನೀಕರಣಮುಕ್ತಗೊಳಿಸುವ ಕ್ರಮವನ್ನು ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದ್ದಾರೆ.
ಕಲೆಕ್ಟ್ರೇಟ್‌ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಇಂಭಶೇಖರನ್, ವಿಭಾಗೀಯ ಅರಣ್ಯಾಧಿಕಾರಿ ಜೋಸ್ ಮ್ಯಾಥ್ಯು, ಜಿಲ್ಲಾ ಪಶು ಸಂಗೋಪನಾ ಅಧಿಕಾರಿ ಡಾ. ಕೆ.ವಿ. ಬಿಂದು ಮೊದಲಾದವರು ಮಾತನಾಡಿದರು. ಹಲವರು ಭಾಗವಹಿಸಿದರು.







