ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಂತೆ ಕುಂಬಳೆಯಲ್ಲಿ ನಡೆಯುತ್ತಿರುವ ತಾತ್ಕಾಲಿಕ ಟೋಲ್‌ಗೇಟ್ ನಿರ್ಮಾಣದ ವಿರುದ್ಧ ಬಿಜೆಪಿ ಕುಂಬಳೆ ಮಂಡಲ ಸಮಿತಿ ಕೇಂದ್ರ ಸಾರಿಗೆ ಇಲಾಖೆ ಸಚಿವರಿಗೆ ದೂರು ನೀಡಿದೆ. ನ್ಯಾಯಾಲಯದ ತೀರ್ಪಿನ ಮೂಲಕ ಟೋಲ್‌ಗೇಟ್ ಜ್ಯಾರಿಗೆ ಬಂದರೆ ಪ್ರಸ್ತುತ ಟೋಲ್‌ಗೇಟ್ ವ್ಯಾಪ್ತಿಯಲ್ಲಿರುವ ಕುಂಬಳೆ, ಪುತ್ತಿಗೆ, ಮಂಗಲ್ಪಾಡಿ ಪಂಚಾಯತ್‌ಗಳ ಹಾಗೂ ಇತರ ಭಾಗಗಳ ಖಾಯಂ ಪ್ರಯಾಣಿಕರ ವಾಹನಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕೆಂದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಯವರಲ್ಲಿ ಆಗ್ರಹಿಸಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.
ದೂರು ಪರಿಹಾರಕ್ಕಾಗಿ ಅಗತ್ಯವಿ ದ್ದರೆ ಸಚಿವರನ್ನು ನೇರವಾಗಿ ಭೇಟಿ ಯಾಗಲು ದೆಹಲಿಗೆ ತೆರಳುವುದಾ ಗಿಯೂ, ಜನರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಾಣಲು ಬಿಜೆಪಿ ಮುಂಚೂಣಿಯಲ್ಲಿರುತ್ತದೆ ಎಂದು ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.