ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೈನರ್ ಲಾರಿ ಅಪಘಾತ: ತಪ್ಪಿದ ಭಾರೀ ದುರಂತ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಪೆರಿಯಾಟಡ್ಕದಲ್ಲಿ ಕಂಟೈನರ್ ಲಾರಿ ಅಪಘಾತಕ್ಕೀಡಾಗಿದೆ. ಹೆದ್ದಾರಿಯ ಆವರಣ ಗೋಡೆಗೆ ಲಾರಿಯ ಹಿಂಭಾಗ ಸಿಲುಕಿ ನಿಂತಿರುವುದರಿಂದ ಅದು ಕೆಳಗೆ ಉರುಳದೆ ಭಾರೀ ದೊಡ್ಡ ಅಪಾಯ ತಪ್ಪಿಹೋಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ 10 ಮೀಟರ್ ಎತ್ತರದಲ್ಲಿದೆ. ಪೆರಿಯಾಟಡ್ಕ, ಮುನಿಕ್ಕಲ್ ತಿರುವಿನಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಸಮೀಪ ಕಾಸರಗೋಡು ಭಾಗಕ್ಕಿರುವ ರಸ್ತೆಯಲ್ಲಿ ಲಾರಿ ಅಪಘಾತಕ್ಕೀಡಾಗಿದೆ. ಆವರಣಗೋಡೆಗೆ ತಾಗಿ ನಿಲ್ಲದಿರುತ್ತಿದ್ದಲ್ಲಿ ಲಾರಿ ಕೆಳಗಿನ ಸರ್ವೀಸ್ ರಸ್ತೆಗೆ ಮಗುಚಿ ಬಿದು  ಭಾರೀ ದೊಡ್ಡ ಅಪಘಾತ ಸಂಭವಿಸುತ್ತಿತ್ತೆಂದು ನಾಗರಿಕರು ಹೇಳುತ್ತಿದ್ದಾರೆ. ಅಪಘಾತದಲ್ಲಿ ಲಾರಿ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

You cannot copy contents of this page