ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಂಟೈನರ್ ಲಾರಿ ಬೆಂಕಿಗಾಹುತಿ

ಹೊಸದುರ್ಗ: ಬೇಕಲ ಮವ್ವಲ್‌ನಲ್ಲಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಂಟೈನರ್ ಲಾರಿಗೆ ಬೆಂಕಿ ತಗಲಿದೆ. ಉಡುಪಿಯಿಂದ ಕೊಚ್ಚಿಗೆ ತೆರಳುತ್ತಿದ್ದ ಫ್ರಿಡ್ಜ್ ಹೇರಿಕೊಂಡು ಬಂದ ಲಾರಿಗೆ ಬೆಂಕಿ ತಗಲಿದೆ. ಬೇಕಲ ರೈಲ್ವೇ ಮೇಲ್ಸೇತುವೆಯಲ್ಲಿ ವಾಹನಗಳು ಸಂಚರಿಸುವುದಕ್ಕೆ ನಿಯಂತ್ರಣ ಏರ್ಪಡಿಸಿದ ಹಿನ್ನೆಲೆಯಲ್ಲಿ ಮವ್ವಲ್ ಮೂಲಕ ವಾಹನಗಳು ಸಂಚರಿಸುತ್ತಿವೆ. ಇಂದು ಬೆಳಿಗ್ಗೆ 6 ಗಂಟೆ ವೇಳೆಗೆ ಕಂಟೈನರ್ ಲಾರಿ ಸಂಚರಿಸುವಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬೆಂಕಿ ತಗಲಿದೆ. ಮಾಹಿತಿ ತಿಳಿದು ಕಾಸರ ಗೋಡು ಹಾಗೂ ಕಾಞಂಗಾಡ್‌ನಿಂದ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿದೆ. ಬಳಿಕ ಬೆಂಕಿ ನಂದಿಸಲಾಗಿದೆ. ಲಾರಿ ಆಂಶಿಕವಾಗಿ ಉರಿದು ನಾಶವಾಗಿದೆ.

You cannot copy contents of this page