ನಿರಂತರ ಉಪಟಳ: ತಾಕೀತು ನೀಡಿದ ಯುವತಿಯ ಟೈಲರಿಂಗ್ ಅಂಗಡಿಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಕಣ್ಣೂರು: ಹಿಂದಿನಿಂದ ನಡೆದುಕೊಂಡು ಹೋಗಿ ನಿರಂತರ ಉಪಟಳ ನೀಡು ತ್ತಿರುವುದರ ವಿರುದ್ಧ ಪ್ರತಿಕ್ರಿಯಿಸಿದ ಯುವತಿಯ ಟೈಲರಿಂಗ್ ಶಾಪ್‌ಗೆ ನುಗ್ಗಿ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಇರಿಟ್ಟಿ ಕೋಳಿಕ್ಕಡವ್ ನಿವಾಸಿ ಮೋಹನನ್ (48) ಆತ್ಮಹತ್ಯೆಗೈದ ಯುವಕ. ಕೋಳಿಕ್ಕಡವ್ ನಿವಾಸಿಯ ಮಾಲಕತ್ವದಲ್ಲಿ ಕರಿಯಾಲ್‌ನಲ್ಲಿರುವ ಅಂಗಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಯುವತಿ ವಿವಾಹಿತೆಯಾಗಿದ್ದಾಳೆ. ಮೋಹನನ್ ಕುಟುಂಬದಿಂದ ದೂರವಿದ್ದು ವಾಸಿಸುತ್ತಿದ್ದನು. ಈ ಮಧ್ಯೆ ಟೈಲರಿಂಗ್ ಅಂಗಡಿ ಮಾಲಕಿಯಾದ ಯುವತಿಯ ಹಿಂದೆ ನಡೆದು ಉಪಟಳ ನೀಡುತ್ತಿದ್ದುದಾಗಿ ಹೇಳಲಾಗಿದೆ.

ಇದರ ವಿರುದ್ಧ ಯುವತಿ ತಾಕೀತು ನೀಡಿದ್ದಳು. ಆದರೆ ಆ ಬಳಿಕವೂ ಇತ ಉಪಟಳ ನೀಡುತ್ತಿದ್ದನೆನ್ನಲಾಗಿದೆ. ಗುರುವಾರ ರಾತ್ರಿ ಟೈಲರಿಂಗ್ ಅಂಗಡಿಗೆ ತಲುಪಿದ ಮೋಹನನ್ ಅಂಗಡಿಯ ಬೀಗ ಮುರಿದು ಒಳನುಗ್ಗಿ ಆತ್ಮಹತ್ಯೆ ಗೈದಿರುವುದಾಗಿ ಹೇಳಲಾಗು ತ್ತಿದೆ. ಕೈಗಳು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಸಾವಿನಲ್ಲಿ ಅಸಹಜತೆ ಇದೆ ಎಂದು ಸೃಷ್ಟಿಸಲು ಕೈಗಳನ್ನು ಸ್ವತಃ ಆತನೇ ಕಟ್ಟಿಕೊಂಡಿ ರಬೇಕೆಂದು ಶಂಕಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಡಿವೈಎಸ್‌ಪಿ ಪಿ.ಕೆ. ಧನಂಜಯಬಾಬುರ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

You cannot copy contents of this page