ಅಡುಗೆ ಅನಿಲ ಕ್ಷಾಮ: ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳಿಗೆ ಬೇಕಾಬಿಟ್ಟಿ ಬೆಲೆ; ದರಪಟ್ಟಿ ಪ್ರದರ್ಶಿಸಲು ಆಗ್ರಹ

ಕಾಸರಗೋಡು: ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಕ್ಷಾಮವನ್ನು ನೆಪ ಮಾಡಿಕೊಂಡು ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳಿಗೆ ಬೇಕಾಬಿಟ್ಟಿ ಬೆಲೆ ವಸೂಲು ಮಾಡುತ್ತಿರುವುದಾಗಿ ದೂರಲಾಗಿದೆ. ಜಿಲ್ಲೆಯ ಹೋಟೆಲ್‌ಗಳಲ್ಲಿ ಆಹಾರಕ್ಕೆ 10ರಿಂದ 20ಶೇ. ವರೆಗೆ ಹೆಚ್ಚುವರಿ ಬೆಲೆ ವಸೂಲು ಮಾಡುತ್ತಿರುವುದಾಗಿ ದೂರು ಕೇಳಿ ಬಂದಿದೆ. ಹೋಟೆಲ್  ಆಹಾರವನ್ನೇ ಆಶ್ರಯಿಸುವವರಿಗೆ ಇದು ದೊಡ್ಡ ಆಘಾತ ಸೃಷ್ಟಿಸಿದೆ. ಆಹಾರ ಪದಾರ್ಥಗಳಿಗೆ ಇಮ್ಮಡಿ ದರ ನೀಡಬೇಕಾಗಿ ಬರುತ್ತಿದ್ದು, ಆಹಾರ ಪದಾರ್ಥಗಳ ದರ ಪಟ್ಟಿಯನ್ನು ಪ್ರದರ್ಶಿಸಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ. ಆದರೆ ಹೋಟೆಲ್ ಮಾಲಕರು ಇದಕ್ಕೆ ಸಿದ್ಧರಾಗುತ್ತಿಲ್ಲ. ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರ ಈ ಮೊದಲೇ ಎಲ್‌ಪಿಜಿ ಕ್ಷಾಮದ ಹೆಸರಲ್ಲಿ ಹೋಟೆಲ್‌ಗಳಲ್ಲಿ ಅಧಿಕ ದರ ವಸೂಲು ಮಾಡಬಾರದೆಂದು ನಿರ್ದೇಶಿಸಿತ್ತು. ರಾಜ್ಯ ಸರಕಾರ ಈಗ ವಿಧಾನಸಭಾ ಚುನಾವಣೆ ನಡೆಯುವ ಸಮಯವಾದ ಕಾರಣ ಈ ವಿಷಯದಲ್ಲಿ ಈಗ ಮಧ್ಯ ಪ್ರವೇಶ ನಡೆಸುತ್ತಿಲ್ಲ. ಈ ಮಧ್ಯೆ ಸಿಲಿಂಡರ್ ಕ್ಷಾಮ ಇರುವ ಕಾರಣ ಹೋಟೆಲ್ ಮಾಲಕರು ೪೦೦೦ ರೂ.ನಷ್ಟು ನೀಡಿ ಸಿಲಿಂಡರ್‌ಗಳನ್ನು ಕಾಳಸಂತೆ ಮೂಲಕ ಖರೀದಿಸುತ್ತಿ ರುವುದಾಗಿಯೂ ಹೇಳಲಾಗುತ್ತಿದೆ. ಇಷ್ಟು ಹೆಚ್ಚು ದರ ಪಡೆದು ಸಿಲಿಂಡರ್‌ಗಳನ್ನು ನೀಡುತ್ತಿರುವುದು ಯಾರು ಎಂಬ ಬಗ್ಗೆಯೂ ಮಾಲಕರು ಬಹಿರಂಗಪಡಿ ಸುತ್ತಿಲ್ಲ. ಲಭಿಸುತ್ತಿರುವುದು ಮೊಟಕಾಗ ಬಹುದೋ ಎಂಬ ಆತಂಕ ಹೋಟೆಲ್ ಮಾಲಕರಲ್ಲಿದೆ. ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕೇಂದ್ರ, ರಾಜ್ಯ ಸರಕಾರಗಳು ಕಠಿಣ ಕ್ರಮಗಳನ್ನು ಸ್ವೀಕರಿಸುತ್ತಿದೆ. ಹೀಗಿದ್ದರೂ ಅಪರಿಮಿತ ದರ ಪಡೆದು ಕಾಳಸಂತೆಯಲ್ಲಿ ಹೋಟೆಲ್‌ಗಳಿಗೆ ಸಿಲಿಂಡರ್‌ಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ದರವೂ ಹೆಚ್ಚುತ್ತಿದೆ.

ಕಳೆದ 15 ದಿನದ ಮಧ್ಯೆ ಚಹಾಕ್ಕೆ ಜಿಲ್ಲೆಯಲ್ಲಿ 15 ರೂ.ನಿಂದ 20 ರೂ.ವರೆಗೆ ವಸೂಲು ಮಾಡಲಾಗುತ್ತಿದೆ. ಇದೇ ವೇಳೆ ಎಣ್ಣೆ ಪದಾರ್ಥಗಳಿಗೆ 15ರಿಂದ 25 ರೂ.ವರೆಗೂ ಪಡೆಯ ಲಾಗುತ್ತಿದೆ. ಪೊರೋಟ, ಚಪಾತಿ, ಕಡಲೆ ಪದಾರ್ಥ ಎಂಬಿವುಗಳಿಗೂ ದರ ಹೆಚ್ಚಳವಾಗಿದೆ. ಕೋಳಿ, ಮೀನು, ಬೀಫ್ ಪದಾರ್ಥಗಳಿಗೂ, ಊಟಕ್ಕೂ ಬೆಲೆ ಹೆಚ್ಚಳವಾಗಿದೆ.

ಸಸ್ಯಾಹಾರಿ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಸಂಖ್ಯೆ ಕಡಿಮೆ ಮಾಡಿ ಬೆಲೆ ಹೆಚ್ಚಿಸುತ್ತಿರು ವುದಾಗಿಯೂ ಹೇಳಲಾಗುತ್ತಿದೆ. ಮಾಂಸಾಹಾರಿ ಹೋಟೆಲ್‌ದಳಲ್ಲಿ ಬಿರಿಯಾನಿ ಸಹಿತಹ ಆಹಾರ ಪದಾರ್ಥಗಳಿಗೂ ಬೆಲೆ ಹೆಚ್ಚಳವಾಗಿದೆ. ಕೆಲವು ಹೋ ಟೆಲ್‌ಗಳು ಮುಚ್ಚುಗಡೆಗೊಂಡ ಕಾರಣ ಇರುವ ಹೋಟೆಲ್‌ಗಳು ಕಾಳಸಂತೆ ಮೂಲಕ ಸಿಲಿಂಡರ್ ಪಡೆದು ಕಾರ್ಯಾಚರಣೆ ನಡೆಸುತ್ತಿವೆ. ಕೆಲವು ಹೋಟೆಲ್‌ಗಳನ್ನು ಮಧ್ಯಾಹ್ನದ ವೇಳೆಗೆ ಮುಚ್ಚಬೇಕಾಗುತಿ ರುವುದಾಗಿಯೂ ಹೇಳಲಾಗುತ್ತಿದೆ. ಸಿಲಿಂಡರ್ ಕ್ಷಾಮವನ್ನು ಪರಿ ಹರಿಸಬೇಕೆಂದು ಆಗ್ರಹಿಸಿ ಹೋಟೆಲ್ ಮಾಲಕರು ಆಂದೋಲನಕ್ಕಿಳಿದಿದ್ದಾರೆ.

You cannot copy contents of this page