ಸಹಕಾರಿ ಪಿಂಚಣಿದಾರರ ಅನಿರ್ದಿಷ್ಟ ಹೋರಾಟ ವಾಹನ ಜಾಥಾಕ್ಕೆ ಹೊಸಂಗಡಿಯಲ್ಲಿ ಚಾಲನೆ

ಮಂಜೇಶ್ವರ: ಸಹಕಾರಿ ಪಿಂಚಣಿದಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಕೋ-ಆಪರೇಟಿವ್ ಸರ್ವೀಸ್ ಪೆನ್ಶನರ್ಸ್ ಅಸೋಸಿಯೇಶÀನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅನಿಶ್ಚಿತಾವಧಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಇದರಂಗವಾಗಿ ರಾಜ್ಯ ಸಮರ ಪ್ರಚಾರ ವಾಹನ ಜಾಥಾ ನಿನ್ನೆ ಹೊಸಂಗಡಿಯಲ್ಲಿ ಉದ್ಘಾಟನೆಗೊಂಡಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಮುಂಡೂರು ರಾಮಕೃಷ್ಣನ್ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಎ.ಎಂ. ಮೇರಿ ಟೀಚರ್ ಜಾಥಾ ಉದ್ಘಾಟಿಸಿದರು. ಸಹಕಾರ ಜನತಾಂತ್ರಿಕ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ. ನೀಲಕಂಠನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಙಳ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ, ಸಂಘಟನೆ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಶುಭಾಶಯ ಕೋರಿದರು. ಸಂಘಟನೆ ಅಧ್ಯಕ್ಷ ಸಿ.ವಿ. ನಾರಾಯಣನ್, ಕಾರ್ಯದರ್ಶಿ ಎಂ. ವಿಜಯನ್ ಉಪಸ್ಥಿತರಿದ್ದರು. 2021ರಿಂದ ಸ್ಥಗಿತಗೊಂಡ 10 ಶೇಕಡಾ ಭತ್ಯೆ ಪುನರ್‌ಸ್ಥಾಪನೆ, ಪಿಂಚಣಿ ಪರಿಷ್ಕರಣೆ, 15 ಶೇಕಡಾ ಮಧ್ಯಂತರ ಭತ್ಯೆ, ವೈದ್ಯಕೀಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರ ತಕ್ಷಣ ಈಡೇರಿಸಬೇಕು ಎಂದು ನಾಯಕರು ಆಗ್ರಹಿಸಿದರು. ಫೆಬ್ರವರಿ 9ರಿಂದ 17ರವರೆಗೆ ತಿರುವನಂತಪುರAನಲ್ಲಿ ರಿಲೇ ಸತ್ಯಾಗ್ರಹ ಹಾಗೂ ಫೆಬ್ರವರಿ 23ರಿಂದ ಅನಿಶ್ಚಿತಾವಧಿ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ಸಂಬAಧ ಪಟ್ಟವರು ತಿಳಿಸಿದ್ದಾರೆ.

RELATED NEWS

You cannot copy contents of this page