ಕುಂಬಳೆ: ಅನಂತಪುರ ಫ್ಲೈವುಡ್ ಕಾರ್ಖಾನೆಯಿಂದ ನಾಪತ್ತೆಯಾಗಿದ್ದ ಜೋಡಿಯನ್ನು ಶೊರ್ನೂರಿನಿಂದ ಅಲ್ಲಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಅನಂತಪುರ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದ ಅಸ್ಸಾಂ ನಿವಾಸಿ ನೂರುಲ್ ಇಸ್ಲಾಂರ ಪತ್ನಿ ಅಜಿದ ಕಾಥೂನ್ (22) ನಾಪತ್ತೆಯಾದ ಯುವತಿಯಾಗಿದ್ದು, ಇದೇ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದ ಅಸ್ಸಾಂ ನಿವಾಸಿಯ ಜೊತೆಯಲ್ಲಿ ಶೊರ್ನೂ ರಿನಿಂದ ಸೆರೆಹಿಡಿಯಲಾಗಿದೆ.
ಪತಿ ನೂರುಲ್ ಇಸ್ಲಾಂ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದರು. ಒಂದೂವರೆ ವರ್ಷದ ಮಗುವಿನ ಜೊತೆ ಪತ್ನಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಲವು ಸಮಯದಿಂದ ನೂರುಲ್ ಇಸ್ಲಾಂ ಫ್ಲೈವುಡ್ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದು, ಇತ್ತೀಚೆಗೆ ಇಲ್ಲಿಗೆ ಅಸ್ಸಾಂನಿಂದ ಇನ್ನೋರ್ವ ಬಂದು ಕೆಲಸಕ್ಕೆ ಸೇರಿದ್ದನು. ತನ್ನ ಪತ್ನಿಯನ್ನು ನಿನ್ನೆ ಮಧ್ಯಾಹ್ನ ಆತ ಕರೆದುಕೊಂಡು ಹೋಗಿರುವುದಾಗಿ ನೂರುಲ್ ಇಸ್ಲಾಂ ದೂರಿದ್ದಾರೆ. ಇದರಂತೆ ವಿವಿಧ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿತ್ತು. ತನಿಖೆ ನಡೆಯುತ್ತಿದ್ದ ಮಧ್ಯೆ ಶೊರ್ನೂರು ರೈಲ್ವೇ ನಿಲ್ದಾಣದಿಂದ ಇಲ್ಲಿನ ಪೊಲೀಸರು ಇವರಿಬ್ಬರನ್ನು ಸೆರೆಹಿಡಿದಿದ್ದಾರೆ. ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಪೊಲೀಸರು, ಸಂಬಂಧಿಕರು, ಪತಿ ಶೊರ್ನೂರಿಗೆ ತೆರಳಿದ್ದಾರೆ.