ಆಲಪ್ಪುಳ: ಆಡಳಿತ ನಿರ್ವಹಣೆಗೆ ಅಡ್ಡಿಯಾಗಿರುವ ಹಾಗೂ ವಿಧಾನಸಭೆಗಳ ಅಧಿಕಾರ ವನ್ನು ಕಸಿಯಲೆತ್ನಿಸುವ ರಾಜ್ಯಪಾಲರ ಹುದ್ದೆ ಅಗತ್ಯವಿಲ್ಲವೆಂದು ಸಿಪಿಐ ರಾಜ್ಯ ಸಮ್ಮೇಳನ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ ಸಂವಿಧಾನದಲ್ಲಿ ತಿದ್ದುಪಡಿ ನಡೆಸಿ ತುರ್ತಾಗಿ ರಾಜ್ಯಪಾ ಲರನ್ನು ತೆರವುಗೊಳಿಸಬೇ ಕೆಂದೂ ಸಮ್ಮೇಳನ ಒತ್ತಾಯಿಸಿದೆ. ಸಂಘ ಪರಿವಾರ ಹಾಗೂ ಕೇಂದ್ರ ಸರಕಾರದ ಇಚ್ಛೆಗನುಸಾರವಾಗಿ ರಾಜ್ಯಪಾಲರು ವರ್ತಿಸುತ್ತಾರೆ. ಈ ಮೂಲಕ ಫೆಡರಲ್ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿಯಲು ರಾಜ್ಯಪಾ ಲರು ಪ್ರಯತ್ನಿಸುತ್ತಾರೆಂದೂ ಸಿಪಿಐ ಸಮ್ಮೇಳನ ಆರೋಪಿಸಿದೆ. ಸಿಪಿಐ 25ನೇ ಪಾರ್ಟಿ ಕಾಂಗ್ರೆಸ್‌ನ ಪೂರ್ವಭಾವಿಯಾಗಿ ಸೆ.೮ರಿಂದ ನಡೆಯುತ್ತಿರುವ ರಾಜ್ಯ ಸಮ್ಮೇಳನ ಇಂದು ಸಮಾಪ್ತಿಗೊಳ್ಳಲಿವೆ. ಇಂದು ಅಪರಾಹ್ನ 3 ಗಂಟೆಗೆ ರೆಡ್ ವಾಲೆಂಟಿಯರ್‌ಗಳಿಂದ ಬೃಹತ್ ಪರೇಡ್ ನಡೆಯಲಿದೆ.
