ಸಿಪಿಐ ರಾಜ್ಯ ಸಮ್ಮೇಳನಕ್ಕೆ ಅದ್ದೂರಿಯ ಚಾಲನೆ

ಆಲಪ್ಪುಳ:  ಸಿಪಿಐಯ ರಾಜ್ಯ ಸಮ್ಮೇಳನಕ್ಕೆ ಆಲಪ್ಪುಳದಲ್ಲಿ ಅದ್ದೂರಿಯ ಚಾಲನೆ ದೊರಕಿದೆ. ಕಯ್ಯೂರು, ಪಾಳಯಂ ಮತ್ತು ಗುರುನಾಡ್ ಎಂಬೆಡೆಗಳಿಂದಾಗಿ ಬಂದ ಪತಾಕೆ, ಬ್ಯಾನರ್ ಮತ್ತು ಧ್ವಜಸ್ತಂಭಗಳ ಜಾಥಾ ನಿನ್ನೆ ಸಮ್ಮೇಳನ ನಗರದಲ್ಲಿ ಸಂಗಮಿಸಿದ ಬಳಿಕ ವಯಲಾರು ಹೋರಾಟ ನೇತಾರೆ ಪಿ.ಕೆ. ಮೇದಿನಿ ಧ್ವಜಾರೋಹಣ ನಡೆಸುವ ಮೂಲಕ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊ ವಿಶ್ವಂ, ಅಸಿಸ್ಟೆಂಟ್ ರಾಜ್ಯ ಕಾರ್ಯದರ್ಶಿ ಸಂಸದ ಪಿ.ಪಿ. ಸುನೀಶ್, ಸಚಿವರುಗಳಾದ ಪಿ. ಪ್ರಸಾದ್, ಕೆ. ರಾಜನ್ ಪ್ರಧಾನ ಸಂಚಾಲಕ ಟಿ.ಜೆ. ಆಂಜಲೋಸ್, ಕೆ. ಪ್ರಕಾಶ್‌ಬಾಬು, ಸತ್ಯನ್ ಮೊಗೇರಿ, ಕೆ.ಪಿ. ರಾಜೇಂದ್ರನ್, ವಿ. ಚಾತುಣ್ಣಿ, ಕಿಸಾನ್ ಸಭಾ ರಾಜ್ಯ ಅಧ್ಯಕ್ಷೆ ಕೆ.ವಿ. ವಸಂತ ಕುಮಾರಿ, ಟಿ. ಬಾಲನ್ ಸೇರಿದಂತೆ ಪಕ್ಷದ ಹಲವು ನೇತಾರರು ಹಾಗೂ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದರು. ಸಮ್ಮೇಳನ ಸೆ. 12ರ ತನಕ ಮುಂದುವರಿಯಲಿದೆ.

You cannot copy contents of this page