ಬೆಳ್ಳೂರು ಪಂ. ಮತದಾರರ ಪಟ್ಟಿಯಲ್ಲಿ ವಂಚನೆ-ಸಿಪಿಎಂ ಆರೋಪ

ಬೆಳ್ಳೂರು: ಬೆಳ್ಳೂರು ಗ್ರಾಮ ಪಂಚಾಯತ್ ಸೆ. 2ರಂದು ಪ್ರಕಟಿಸಿದ ಸ್ಥಳೀಯಾಡಳಿತ ಚುನಾವಣೆ ಮತದಾರರ ಪಟ್ಟಿ ಪಕ್ಷಪಾತ ಹಾಗೂ ಕಾನೂನು ವಿರುದ್ಧ ರೀತಿಯಲ್ಲಿದೆಯೆಂದು ಸಿಪಿಎಂ ಬೆಳ್ಳೂರು ಲೋಕಲ್ ಸಮಿತಿ ಆರೋಪಿಸಿದೆ. ವಿವಿಧ ವಾರ್ಡ್‌ಗಳಲ್ಲಿ ಒಳಪಡಬೇಕಾದ ಯಥಾರ್ಥ ಮತದಾರರ ಹೆಸರುಗಳನ್ನು ಹೊರತುಪಡಿಸಲಾಗಿದೆ. ಅದೇ ರೀತಿ ಹೊರಡುಪಡಿಸಬೇಕಾದ ಮತಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಚುನಾವಣೆ ಮಾನದಂಡ ಪ್ರಕಾರದ ವಾರ್ಡ್ ಗಡಿಯನ್ನು ಪೂರ್ಣವಾಗಿ ಉಲ್ಲಂಘಿಸಲಾಗಿದೆ. ಹಿಯರಿಂಗ್‌ಗೆ ಹಾಜರಾಗದವರನ್ನು ಹಾಗೂ ದಾಖಲೆ ಸಲ್ಲಿಸದವರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಇದೇ ವೇಳೆ  ದಾಖಲೆಗಳ ಸಹಿತ ಹಿಯರಿಂಗ್‌ಗೆ ಹಾಜರಾದವರನ್ನು ಪಟ್ಟಿಯಿಂದ ಹೊರತುಪಡಿಸಲಾಗಿದೆ. ಒಂದೇ ಮನೆ ನಂಬ್ರದಲ್ಲಿ ೩೮ರಷ್ಟು ಮತಗಳನ್ನು ಕಾನೂನು ವಿರುದ್ಧವಾಗಿ ಸೇರಿಸಲಾಗಿದೆಯೆಂದೂ  ಸಿಪಿಎಂ ಆರೋಪಿಸಿದೆ. ಚುನಾವಣಾ ಆಯೋಗ ಹೊರಡಿಸಿದ ಮಾನದಂಡಗಳನ್ನು ಪಾಲಿಸದೆ ಪಕ್ಷಪಾತ ರೀತಿಯಲ್ಲ್ಲಿ ಮತದಾರರ ಪಟ್ಟಿ ತಯಾರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕುರಿತಾಗಿ ಸಮಗ್ರ ತನಿಖೆ ನಡೆಸಿ ಸರಿಯಾದ ರೀತಿಯಲ್ಲಿ ಮತದಾರರ ಪಟ್ಟಿ ತಯಾರಿಸಬೇ ಕೆಂದು ಒತ್ತಾಯಿಸಿ ಸಿಪಿಎಂ ಕಾಸರಗೋಡು ಎಡಿಎಂಗೆ ಮನವಿ ಸಲ್ಲಿಸಿದೆ.

RELATED NEWS

You cannot copy contents of this page