ಸಿಪಿಎಂ, ಸಿಐಟಿಯು ನೇತಾರ ಕೆ. ಭಾಸ್ಕರನ್ ನಿಧನ

ಕಾಸರಗೋಡು: ಸಿಪಿಎಂ, ಸಿಐಟಿಯು ನೇತಾರನಾಗಿದ್ದ ನುಳ್ಳಿಪ್ಪಾಡಿ ಚೆನ್ನಿಕರೆ ದಿನೇಶ್ ಕೃಷ್ಣ ಭವನದ ಕೆ. ಭಾಸ್ಕರನ್ (72) ನಿಧನಹೊಂದಿದರು. ಅಸೌಖ್ಯ ಬಾಧಿಸಿದ್ದ ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ.

ಬೇಡಗ ಕೊಳತ್ತೂರು ಕಾಣಿಯಡ್ಕದ ದಿ| ಕೊರಗನ್-ಕುಂಞಮ್ಮಾರಮ್ಮ ದಂಪತಿಯ ಪುತ್ರನಾದ ಭಾಸ್ಕರನ್ ಬೀಡಿ ಕಾರ್ಮಿಕನಾಗಿ ರಾಜಕೀಯ ರಂಗಕ್ಕೆ ತಲುಪಿದ್ದರು.

ಸಿಪಿಎಂ ಏರಿಯಾ ಕಮಿಟಿ ಸದಸ್ಯ, ಲೋಕಲ್ ಸೆಕ್ರೆಟರಿ, ಸಿಐಟಿಯು ಏರಿಯಾ ಸೆಕ್ರೆಟರಿ, ಜಿಲ್ಲಾ  ಕಾರ್ಯದರ್ಶಿ ಉಪಾಧ್ಯಕ್ಷ, ಬೀಡಿ ಕಾರ್ಮಿಕ ಯೂನಿಯನ್ ತಾಲೂಕು ಸೆಕ್ರೆಟರಿ, ರಾಜ್ಯಸಮಿತಿ ಸದಸ್ಯ, ಕ್ಯಾಶ್ಯೂ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರ.  ಪ್ರಸ್ತುತ ಕಾಸರಗೋಡು ದಿನೇಶ್ ಬೀಡಿ ಸಹಕಾರಿ ಸಂಘದ ಅಧ್ಯಕ್ಷನಾಗಿದ್ದರು.

ಮೃತದೇಹವನ್ನು ಇಂದು ಬೆಳಿಗ್ಗೆ ನುಳ್ಳಿಪ್ಪಾಡಿಯ ಸಿಪಿಎಂ ಏರಿಯಾ ಕಮಿಟಿ ಕಚೇರಿ, ಬಳಿಕ ಚೆನ್ನಿಕ್ಕೆರೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಮಧ್ಯಾಹ್ನ ೨ ಗಂಟೆಗೆ ಚೆನ್ನಿಕ್ಕರೆಯ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಮೃತರು ಪತ್ನಿ ಎಂ.ವಿ. ಲತ, ಮಕ್ಕಳಾದ ರಮ್ಯ,ರೇಶ್ಮ, ಅಳಿಯಂದಿರಾದ ಸತ್ಯನ್ (ಬೇಡಗಂ), ಬೈಜು(ಅಢುತ್ತಿಲ), ಸಹೋದರ-ಸಹೋದರಿಯರಾದ ವಿ.ಎಂ.ಕೃಷ್ಣನ್ (ಮಾವುಂಗಾಲ್), ವಿ.ಎಂ. ಗೋಪಾಲನ್, ವಿ.ಎಂ. ವೆಳ್ಳಚ್ಚಿ (ಚೆನ್ನಿಕ್ಕರ), ಕಲ್ಯಾಣಿ (ಕೊಳತ್ತೂರು) ಕುಂಞಿಕಣ್ಣನ್  (ಕೊಳತ್ತೂರು), ಶ್ರೀಧರನ್ (ಮಾವುಂಗಾಲ್), ರವೀಂದ್ರನ್ ಪಣಿಕ್ಕರ್ (ಕೊಳತ್ತೂರು) ಹಾಗೂ ಅಪಾರ ಬಂಧ-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ ಕುಂಞಿರಾಮನ್, ನಾರಾಯಣನ್ ಈ ಹಿಂದೆ ನಿಧನಹೊಂದಿದ್ದಾರೆ.

RELATED NEWS

You cannot copy contents of this page