ಕೊಚ್ಚಿ: ಸಿಪಿಎಂ ನೇತಾರನೋರ್ವ ಪಕ್ಷದ ಕಚೇರಿಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉದಯಂಪೇ ರೂರ್ ನೋರ್ತ್ ಲೋಕಲ್ ಕಮಿಟಿ ಮಾಜಿ ಕಾರ್ಯದರ್ಶಿ ಟಿ.ಎಸ್. ಪಂಕಜಾಕ್ಷನ್ ಸಾವಿಗೀಡಾದ ವ್ಯಕ್ತಿ. ಉದಯಂಪೇರೂರ್ ನಡಕ್ಕಾವ್ ಲೋಕಲ್ ಕಮಿಟಿ ಆಫೀಸ್‌ನ ವಾಚನಾಲಯದ ಕೊಠಡಿಯೊಳಗೆ ಮೃತದೇಹ ಪತ್ತೆಯಾಗಿದೆ. ಇಂದು ಬೆಳಿಗ್ಗೆ 6 ಗಂಟೆ ವೇಳೆ ಪತ್ರಿಕೆ ವಿತರಕನಿಗೆ ಮೃತದೇಹ ಕಂಡುಬಂದಿದೆ. ಆತ ನೀಡಿದ ಮಾಹಿತಿಯಂತೆ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪರೇಶನ್‌ನ ನೌಕರನಾಗಿದ್ದ ಪಂಕಜಾಕ್ಷನ್ ಕೆಲವು ವರ್ಷಗಳ ಹಿಂದೆ ನಿವೃತ್ತಿ ಹೊಂದಿ ದ್ದರು. ಪಂಕಜಾಕ್ಷನ್ ಹಾಗೂ ಪತ್ನಿ ಭಾಸುರದೇವಿ ಸಿಪಿಎಂನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಾಲದ ಹೊರೆಯಿಂದಾಗಿ ಪಂಕಜಾ ಕ್ಷನ್ ನೇಣುಬಿಗಿದು ಸಾವಿಗೀಡಾಗಿರಬ ಹುದೆಂಬ ಸೂಚನೆಗಳಿವೆ.







