ಬೆಳ್ಳೂರು: ಬೆಳ್ಳೂರು ಪಂಚಾಯತ್ ಲ್ಲಿ ಸ್ಥಳೀಯಾಡಳಿತ ಚುನಾವಣೆ ಮತದಾರರ ಪಟ್ಟಿಯಲ್ಲಿ ವ್ಯಾಪಕ ವಂಚನೆ ನಡೆಸಿರುವುದಾಗಿ ಆರೋಪಿಸಿ ಸಿಪಿಎಂ ಬೆಳ್ಳೂರು ಲೋಕಲ್ ಕಮಿಟಿ ನೇತೃತ್ವದಲ್ಲಿ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಲಾಯಿತು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಸಿಜಿ ಮ್ಯಾಥ್ಯು ಉದ್ಘಾಟಿಸಿದರು. ಪಕ್ಷದ ಏರಿಯಾ ಕಾರ್ಯದರ್ಶಿ ಎಂ. ಮಾಧವನ್, ಸದಸ್ಯ ರವೀಂದ್ರನ್ ಮಾತನಾಡಿದರು. ಲೋಕಲ್ ಸೆಕ್ರೆಟರಿ ಕೆ.ಎಚ್. ಸೂಫಿ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಮಿಟಿ ಸದಸ್ಯರಾದ ಎ.ಕೆ. ಕುಶಲ ಸ್ವಾಗತಿಸಿ, ಉಷಾ ವಂದಿಸಿದರು.
