ಹೊಸಂಗಡಿಯಲ್ಲಿ ಸಿಪಿಎಂ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರದ ಒತ್ತಾಸೆಯೊಂದಿಗೆ ಕೇರಳದ ಯುಡಿಎಫ್ ಸರಕಾರ ಕೇಂದ್ರ ತನಿಖಾ ಸಂಸ್ಥೆಯ ಪತ್ರದ ಹೆಸರಲ್ಲಿ ಪಕ್ಷದ ಹಿರಿಯ ನೇತಾರ, ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್‌ರನ್ನು ಬೇಟೆಯಾಡುವುದಕ್ಕೆದುರಾಗಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು. ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಅಬ್ದುಲ್ ರಜÁಕ್ ಚಿಪ್ಪಾರ್ ಸ್ವಾಗತಿಸಿದರು.

You cannot copy contents of this page