ಬದಿಯಡ್ಕ ಪಂಚಾಯತ್‌ಗೆ 28ರಂದು ಸಿಪಿಎಂನಿಂದ ಬಹುಜನ ಮಾರ್ಚ್ : ನಾಳೆ ವಾಹನ ಪ್ರಚಾರ ಜಾಥಾ

ಬದಿಯಡ್ಕ: ಬದಿಯಡ್ಕ ಪಂಚಾ ಯತ್‌ನಲ್ಲಿ ಅಭಿವೃದ್ಧಿ ಕುಂಠಿತಗೊಂ ಡಿರುವುದನ್ನು ಪ್ರತಿಭಟಿಸಿ ಈ ತಿಂಗಳ 28ರಂದು ಪಂಚಾ ಯತ್‌ಗೆ ಬಹುಜನ ಮಾರ್ಚ್ ಹಾಗೂ ಧರಣಿ ನಡೆಸಲು ಸಿಪಿಎಂ ಪಂಚಾಯತ್ ಸಮಿತಿ ತೀರ್ಮಾನಿಸಿ ದೆ. ಇದರ ಪ್ರಚಾರಾರ್ಥ ನಾಳೆ ಸಿಪಿಎಂ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ವಾಹನ ಜಾಥಾ ನಡೆಸಲಿದೆ.  ನಾಳೆ  ಬೆಳಿಗ್ಗೆ 9.30 ಕ್ಕೆ ಕನ್ಯಪ್ಪಾಡಿ ಪೇಟೆಯಲ್ಲಿ ಏರಿಯಾ ಸೆಕ್ರೆಟರಿ  ಸಿ.ಎ. ಸುಬೈರ್ ಜಾಥಾವನ್ನು ಉದ್ಘಾಟಿಸುವರು.   ಐದು ವರ್ಷಗಳಿಂದ ಪಂಚಾಯತ್‌ನಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಹಾಗೂ ಅಧಿಕಾರಿಗಳನ್ನು ನಿಯಂತ್ರಿಸಲು ಆಡಳಿತ ಸಮಿತಿಗೆ ಸಾಧ್ಯ ವಾಗುತ್ತಿಲ್ಲವೆಂದು ಆರೋಪಿಸಿ  ಪಂಚಾಯತ್‌ಗೆ ಮಾರ್ಚ್  ನಡೆಸುವುದಾಗಿ ಸಿಪಿಎಂ ತಿಳಿಸಿದೆ.   ಪ್ರಕಾಶ್ ಅಮ್ಮಣ್ಣಾಯ ನೇತೃತ್ವ ನೀಡುವರು. ಏರಿಯಾ ಸೆಕ್ರೆಟರಿ ಸಿ.ಎ ಸುಬೈರ್ ಉದ್ಘಾಟಿಸುವರು. ಲೈಫ್ ಹೌಸ್ ವಿಲ್ಲಾ ಏಣಿಯರ್ಪು, ಮಾನ್ಯ, ಚೆರ್ಲಡ್ಕ, ಬೀಜಂತ್ತಡ್ಕ, ವಿದ್ಯಾಗಿರಿ, ಪಳ್ಳತ್ತಡ್ಕ ಎಂಬಿಡೆಗಳಲ್ಲಿ ಸಭೆ ನಡೆದ ಬಳಿಕ ಉಕ್ಕಿನಡ್ಕದಲ್ಲಿ ಜಾಥಾ ಸಮಾಪ್ತಿಗೊಳ್ಳಲಿದೆ. ಜಾಥಾ ಸದಸ್ಯರಾದ ಬಿ. ಶೋಭಾ, ಪಿ. ರಂಜಿತ್, ಎಂ.ಎಸ್. ಶ್ರೀಕಾಂತ್, ಸುಬೈರ್ ಬಾಪಾಲಿಪೊನ ಮಾತನಾಡುವರು.

RELATED NEWS

You cannot copy contents of this page