ಕಣ್ಣೂರು: ಮುಸ್ಲಿಂ ಲೀಗ್ ಕಾರ್ಯಕರ್ತರ ಆಕ್ರಮಣದಲ್ಲಿ ಗಂಭೀರ ಗಾಯಗೊಂಡು 13 ವರ್ಷದಿಂದ ಶಯ್ಯಾವಲಂಭಿಯಾಗಿದ್ದ ಸಿಪಿಎಂ ಕಾರ್ಯಕರ್ತ ನಿಧನ ಹೊಂದಿದರು. ತಳಿಪರಂಬ್ ಅರಿಯಿಲ್ ವಳ್ಳೇರಿ ಮೋಹನನ್ (60) ಮೃತಪಟ್ಟವರು. 2012 ಫೆಬ್ರವರಿ 12ರಂದು ಮೋಹನ್‌ರಿಗೆ ಆಕ್ರಮಣ ನಡೆಸಲಾಗಿತ್ತು. ಅಂದು ಬೆಳಿಗ್ಗೆ ಮೋಹನನ್‌ರನ್ನು ಮನೆಯಿಂದ ಎಳೆದುಕೊಂಡು ಹೋಗಿ ಕಡಿದು ಗಾಯಗೊಳಿಸಲಾಗಿತ್ತು. ಮೃತಪಟ್ಟರೆಂದು ತಿಳಿದು ಪೊದೆಗಳೆಡೆಯಲ್ಲಿ ಉಪೇಕ್ಷಿಸಿ ಅಕ್ರಮಿ ತಂಡ ಪರಾರಿಯಾಗಿತ್ತು. ಆಕ್ರಮಣವನ್ನು ತಡೆಯಲೆತ್ನಿಸಿದ ವಿದ್ಯಾರ್ಥಿಯಾದ ಪುತ್ರ ಮಿಥುನ್‌ಗೂ ಗಾಯವುಂಟಾಗಿತ್ತು.
ಆ ಬಳಿಕ 13 ವರ್ಷದಿಂದ ಚಿಕಿತ್ಸೆಯಲ್ಲಿದ್ದ ಮೋಹನನ್ ನಿನ್ನೆ ಬೆಳಿಗ್ಗೆ ಕಣ್ಣೂರು ಎಕೆಜಿ ಆಸ್ಪತ್ರೆಯಲ್ಲಿ ಮೃತಪಟ್ಟರು.