ಬೆಳ್ಳೂರು ಪಂ. ಮತದಾರರ ಪಟ್ಟಿಯಲ್ಲಿ ವಂಚನೆಎಂಬ ಸಿಪಿಎಂನ ಆರೋಪ ಸುಳ್ಳು- ಬಿಜೆಪಿ

ಬೆಳ್ಳೂರು: ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿ ಪ್ರಕಟಿಸಲಾದ ಬೆಳ್ಳೂರು ಗ್ರಾಮ ಪಂಚಾಯತ್‌ನ ಮತದಾರರ ಪಟ್ಟಿಯಲ್ಲಿ ವಂಚನೆ ನಡೆದಿದೆ ಎಂಬ ಸಿಪಿಎಂನ ಆರೋಪ ಸುಳ್ಳು ಎಂಬುದಾಗಿ ಬಿಜೆಪಿ ಬೆಳ್ಳೂರು ಪಂಚಾಯತ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಚುನಾವಣೆಯಲ್ಲಿ ಎದುರಿಸಬೇಕಾದ ಸೋಲನ್ನು ಮುಂಗಡವಾಗಿ ತಿಳಿದುಕೊಂಡ ಸಿಪಿಎಂ ಇಂತಹ ಆರೋಪ ಹೊರಿಸುತ್ತಿದೆಯೆಂದೂ ಬಿಜೆಪಿ ತಿಳಿಸಿದೆ.

ಕಳೆದ ಐದು ವರ್ಷಗಳಿಂದ ಪಂಚಾಯತ್‌ನಲ್ಲಿ ಸಮಗ್ರ ಅಭಿವೃದ್ಧಿ ನಡೆಸಿ ಮುಂದೆ ಸಾಗುತ್ತಿರುವ ಬಿಜೆಪಿ ನೇತೃತ್ವದ ಆಡಳಿತ ಸಮಿತಿ ಜನರಿಂದ ಮೆಚ್ಚುಗೆಗಳಿಸಿದೆ. ಹೀಗಿರುವಾಗ ಇರುವ ಸೀಟು ಕೂಡಾ ನಷ್ಟಗೊಳ್ಳಬಹುದೆಂಬ ಭಯದಿಂದ ಸಿಪಿಎಂ ಇಲ್ಲಸಲ್ಲದ ಆರೋಪಗಳನ್ನು ಹೊರಿಸತೊಡಗಿದೆ. ಪಂಚಾಯತ್‌ನ 11ನೇ ವಾರ್ಡ್‌ನಲ್ಲಿ ಒಂದೇ ಮನೆ ನಂಬ್ರದಲ್ಲಿ ೩೮ರಷ್ಟು ಮತಗಳನ್ನು ಸೇರಿಸಲಾಗಿದೆ ಎಂಬ ಸಿಪಿಎಂನ ಆರೋಪವೂ ಸುಳ್ಳು. 11ನೇ ವಾರ್ಡ್‌ನಲ್ಲಿ ೩೮ ಮತಗಳು 10 ಎಂಬ ನಕಲಿ ಮನೆ ನಂಬ್ರದಲ್ಲಿ ಸೇರಿಕೊಂಡಿರುವುದು ಆನ್‌ಲೈನ್ ಎಂಟ್ರಿ ವೇಳೆ ಮನೆ ನಂಬ್ರದ ಕಾಲಂನಲ್ಲಿ ವಾರ್ಡ್ ನಂಬ್ರ, ಸಬ್‌ನಂಬ್ರದಲ್ಲಿ ಮನೆ ನಂಬ್ರ ಸೇರಿದ್ದು ಇದು ತಾಂತ್ರಿಕ ದೋಷದಿಂದ ಉಂಟಾದುದಾಗಿದೆ. 38 ಮಂದಿ ಕೂಡಾ ಯತಾರ್ಥವಾಗಿ 11ನೇ ವಾರ್ಡ್‌ನ ಖಾಯಂ ನಿವಾಸಿಗಳಾಗಿದ್ದಾರೆಂದೂ ಬಿಜೆಪಿ ತಿಳಿಸಿದೆ.

ಇದೇ ವೇಳೆ ಸಿಪಿಎಂ ಮತದಾರರ ಪಟ್ಟಿಯಲ್ಲಿ ಹಲವರ ಮತಗಳನ್ನು ವಾರ್ಡ್ ಬದಲಿಸಿ ಸೇರಿಸಿಕೊಂಡಿರುವುದಾಗಿಯೂ ಬಿಜೆಪಿ ಆರೋಪಿಸಿದೆ. ಸುಳ್ಳು ಆರೋಪಗಳನ್ನು ಹೊರಿಸಿ ಸಿಪಿಎಂ ಕಾರ್ಯಕರ್ತರು ಪಂಚಾಯತ್‌ನ ನೌಕರರನ್ನು ಬೆದರಿಸಿ, ಆಕ್ರಮಣ ಕಾರಿಗಳಂತೆ ವರ್ತಿಸಿದ್ದಾರೆ. ಇದು ಖಂಡನೀಯವೆಂದು ಬಿಜೆಪಿ ತಿಳಿಸಿದೆ.

RELATED NEWS

You cannot copy contents of this page