ಜನದ್ರೋಹಿ ಆಡಳಿತದ ವಿರುದ್ಧ ಸಿಪಿಎಂನ ಹೋರಾಟ ಮುಂದುವರಿಕೆ- ಎ. ವಿಜಯ ರಾಘವನ್

ಸಿಪಿಎಂನ ವಿಸ್ತೃತ ಜಿಲ್ಲಾ ಸಮಿತಿ ಸಭೆಕಾಸರಗೋಡು: ಸಿಪಿಎಂನ ಎರಡು ದಿನಗಳ ವಿಸ್ತೃತ ಜಿಲ್ಲಾ ಸಮಿತಿ ಸಭೆ  ನಿನ್ನೆ ಸಂಜೆ ನಡೆದ ಬೃಹತ್ ರ‍್ಯಾಲಿಯೊಂದಿಗೆ ಸಮಾಪ್ತಿಗೊಂಡಿತು. ರ‍್ಯಾಲಿಯಲ್ಲಿ ಜಿಲ್ಲೆಯಾದ್ಯಂತದಿಂದ ಆಗಮಿಸಿದ ಸಹಸ್ರಾರು ಸಿಪಿಎಂ ಕಾರ್ಯಕರ್ತರು ಭಾಗವಹಿಸಿದರು. ಬಳಿಕ ವಿದ್ಯಾನಗರದಲ್ಲಿ ನಡೆದ ಸಮಾರೋಪ ಸಭೆಯನ್ನು ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯ ಎ. ವಿಜಯ ರಾಘವನ್ ಉದ್ಘಾಟಿಸಿದರು. ಅವರು ಮಾತನಾಡಿ, ಜನದ್ರೋಹಿ ಆಡಳಿತದ ವಿರುದ್ಧ ಹೋರಾಟ ನಡೆಸುತ್ತಿರುವ ಕಮ್ಯೂನಿಸ್ಟ್ ಪಕ್ಷವನ್ನು ಸದ್ದಡಗಿಸಿ ಪರಾಜಯಗೊಳಿ ಸುವಂತೆ ಮಾಡುವ ಪ್ರಯತ್ನ ಎಂದೂ ಸಫಲವಾಗದು. ಇಂತಹ ಹೋರಾಟ ಗಳನ್ನು ಸಿಪಿಎಂ ಇನ್ನೂ ಮುಂದುವರಿ ಸಲಿದೆ. ಕಳೆದ ಹತ್ತು ವರ್ಷಗಳಿಂದ ಯಾವುದೇ ರೀತಿಯ ವಿದ್ಯುತ್ ಸಮಸ್ಯೆ ಎದುರಿಸದೇ ಇದ್ದ ಕೇರಳ ಇಂದು ಭಾರೀ ವಿದ್ಯುತ್ ಕ್ಷಾಮ ಎದುರಿಸಿ ಜನರು ಕತ್ತಲಲ್ಲಿ ಕಳೆಯಬೇಕಾದ ಸ್ಥಿತಿ ಸಂಜಾತವಾಗಿದೆ.  ಇದು ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರ ಜನರಿಗೆ ನೀಡಿರುವ ಕೊಡುಗೆಯಾಗಿದೆ. ರಾಜ್ಯದ ಆರೋಗ್ಯ ವಲಯವೂ ಹದಗೆಟ್ಟಿದೆ ಎಂದರು. ಮುಸ್ಲಿಂ ಲೀಗ್‌ನ ಕೋಮು ರಾಜಕೀಯಕ್ಕೆ ಕಡಿವಾಣ ಹಾಕಲಾಗುವು ದೆಂದು ಇದೇ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂನ ಹಿರಿಯ ನೇತಾರ ಪಿ. ಜಯರಾಜನ್ ಹೇಳಿದರು.

ಜನರಲ್ಲಿ ಕೋಮು ಭಾವನೆ ಮೂಡಿಸಿ ಅದರಿಂದ ರಾಜಕೀಯ ಲಾಭ ಪಡೆಯುತ್ತಿರುವುದು ಮುಸ್ಲಿಂ ಲೀಗ್‌ನ ರೀತಿಯಾಗಿದೆ. ಮುಸ್ಲಿಂ ವಿಭಾಗದವರಲ್ಲಿ ಮುಸ್ಲಿಂ ಲೀಗ್ ಬಹಿರಂಗವಾಗಿ ಕೋಮು ಭಾವನೆ ಮೂಡಿಸುವಂತೆ ಮಾಡುತ್ತಿದೆ. ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗ  ಉಮೇದ್ವಾರ ಎಪಿಪಿ ಮುಸ್ತಫಾರ ಪರಾಜಯ ಇದಕ್ಕೊಂದು ಉದಾಹರಣೆಯಾಗಿದೆ. ಮುಸ್ಲಿಂ ಲೀಗ್‌ನ ಇಂತಹ ರಾಜಕೀಯವನ್ನು ಹಿಮ್ಮೆಟ್ಟಿಸಲಾಗು ವುದೆಂದೂ ಜಯರಾಜನ್ ಹೇಳಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಹಿರಿಯ ನೇತಾರರಾದ ಡಾ. ಥೋಮಸ್ ಐಸಾಕ್, ಪಿ. ಸೀತಾದೇವಿ, ರಾಜ್ಯ ನೇತಾರರಾದ ಎಂ.ವಿ. ರಾಜನ್, ಪಿ.ಕೆ. ಬಿಜು, ಕೆ.ಪಿ. ಸತೀಶ್ಚಂದ್ರನ್, ಸಿ.ಎಚ್. ಕುಂಞಂಬು, ಪಿ. ಕರುಣಾಕರನ್, ಎಂ.ಪಿ. ಬಾಲಕೃಷ್ಣನ್ ಸೇರಿದಂತೆ ಹಲವರು ಭಾಗವಹಿಸಿದರು.

RELATED NEWS

You cannot copy contents of this page