ಕಾಸರಗೋಡು: ಕಣ್ಣೂರು ಜಿಲ್ಲೆಯ ಪೆರಿಂಙತ್ತೂರ್ ಎಂಬಲ್ಲಿನ 17ರ ಹರೆಯದ ಶಿವಸೂರ್ಯ ಎಂಬ ಬಾಲಕ ನಾಪತ್ತೆಯಾಗಿ ಮೂರು ತಿಂಗಳಾದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತನಿಖೆಯನ್ನು ಕ್ರೈಂ ಬ್ರಾಂಚ್ ವಹಿಸಿಕೊಂಡಿದ್ದು, ಆದರೆ ಬಾಲಕನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಪತ್ತೆಹಚ್ಚಲು ಕ್ರೈಂ ಬ್ರಾಂಚ್ ಲುಕೌಟ್ ನೋಟೀಸು ಹೊರಡಿಸಿದೆ. ಪ್ರಸ್ತುತ ಕಾಸರಗೋಡು ಹಾಗೂ ಇತರ ಜಿಲ್ಲೆಗಳಲ್ಲಿ ಹುಡುಕಾಟ ನಡೆಯುತ್ತಿದೆ. ಇನ್ನು ತನಿಖೆಯನ್ನು ಕಾಶಿಗೆ ವಿಸ್ತರಿಸುವು ದಾಗಿ ತನಿಖಾ ತಂಡ ತಿಳಿಸುತ್ತಿದೆ. ಎಸ್ಪಿ ಕೆ.ವಿ. ವೇಣುಗೋಪಾಲ್ ನೇತೃ ತ್ವದಲ್ಲಿ ತನಿಖೆ ಮುಂದುವರಿಯುತ್ತಿದೆ.
ಮೊಬೈಲ್ ಫೋನ್ ಹಿಡಿದಿಟ್ಟ ಕಾರಣದಿಂದ ಶಿವಸೂರ್ಯ ಅಗೋಸ್ತ್ ೮ರಂದು ಮನೆಯಿಂದ ಹೊರಗೆ ತೆರಳಿದ್ದನು. ಕಾಶಿಗೆ ಹೋಗುವುದಾಗಿ ತಿಳಿಸಿ ಈತ ಬರೆದಿಟ್ಟ ಪತ್ರ ಮನೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲು ಈ ಬಗ್ಗೆ ಚೊಕ್ಲಿ ಪೊಲೀಸರು ತನಿಖೆ ನಡೆಸಿದ್ದರು. ಅನಂತರ ಪ್ರತ್ಯೇಕ ತನಿಖಾ ತಂಡ ಕೇರಳದಾದ್ಯಂತ ಹುಡುಕಾಡಿದರೂ ಯಾವುದೇ ಪ್ರಯೋ ಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಮೊದಲಾ ದೆಡೆಗಳಲ್ಲೂ ಕೊನೆಗೆ ವಾರಣಾಶಿ ಯಲ್ಲೂ ಶೋಧ ನಡೆಸಲಾ ಯಿತು. ಆದರೂ ಶಿವಸೂರ್ಯನ ಕುರಿತು ಯಾವುದೇ ಸೂಚನೆ ಲಭಿಸಿಲ್ಲ. ವಿವಿಧೆಡೆಗಳ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸ ಲಾಗಿದೆಯಾದರೂ ಬಾಲಕನ ದೃಶ್ಯ ಅವುಗಳಲ್ಲಿ ಸೆರೆಯಾ ಗಿಲ್ಲ. ಇದೇ ವೇಳೆ ಶಿವಸೂರ್ಯ ತಲೆಮರೆಸಿಕೊಂಡು ವಾಸಿಸಲು ಬೇರೆ ಯಾರದೋ ಸಹಾಯ ಲಭಿಸುತ್ತಿದೆಯೇ ಎಂಬ ಸಂಶಯವನ್ನು ಪೊಲೀಸರು ಹಾಗೂ ಮನೆಯವರು ವ್ಯಕ್ತಪಡಿಸಿದ್ದಾರೆ.






