ಬದಿಯಡ್ಕ: ಕಳ್ಳರು ಮನೆಗೆ ನುಗ್ಗಿ ವಿದೇಶಿ ಕರೆನ್ಸಿ ಹಾಗೂ 4೦೦೦ ರೂ. ಕಳವು ಗೈದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಶೇಣಿ ಮಣಿಯಂಪಾರ ಹೌಸ್‌ನ ಮುಹಮ್ಮೂದ್ ಮೂಸಾನ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಆ ಬಗ್ಗೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜನವರಿ 12ರಂದು ಸಂಜೆ 6 ಗಂಟೆ ಮತ್ತು 7.30 ರ ನಡುವೆ ತಮ್ಮ ಮನೆಯ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟ್‌ನಲ್ಲಿ ಪರ್ಸ್‌ನಲ್ಲಿರಿಸಲಾಗಿದ್ದ 250 ಯುಎಇ ಧಿರ್ಹಾಂ ಮತ್ತು 4೦೦೦ ರೂ. ಕಳವು ಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಾಸಾನ್ ತಿಳಿಸಿದ್ದಾರೆ.






