ಮಂಜೇಶ್ವರ: ಹೊಸಂಗಡಿ ರೈಲ್ವೇ ಗೇಟ್ ಮೂಲಕ ಬಂಗ್ರಮAಜೇಶ್ವರಕ್ಕೆ ಹಾದು ಹೋಗುವ ರಸ್ತೆಯಲ್ಲಿ ಚರಂಡಿಗೆ ಹಾಸಿದ ಕಾಂಕ್ರೀಟ್ ಸ್ಲಾ ್ಯಬ್ ಹಾನಿಗೊಂಡು ಕಬ್ಬಿಣದ ಸಲಾಕೆ ಗೋಚರಿಸುತ್ತಿದೆ. ಇದು ವಾಹನ ಸಂಚಾರದ ವೇಳೆ ಅಪಾಯಕ್ಕೆ ಕಾರಣವಾಗುತ್ತಿದೆ. ಗೇಟ್ ಪರಿಸರದಲ್ಲಿ ರೈಲ್ವೇ ಇಲಾಖೆ ಇಂಟರ್‌ಲಾಕ್ ಅಳವಡಿಸಿದೆ. ಇದರ ಮಧ್ಯ ಭಾಗದಲ್ಲಿ ಚರಂಡಿಗೆ ನಿರ್ಮಿಸಿದ ಕಾಂಕ್ರೀಟ್‌ನ ಸ್ಲಾ ್ಯಬ್ ಕಳೆದ ಹಲವು ದಿನಗಳಿಂದ ಹಾನಿಗೀಡಾಗಿ ಕಬ್ಬಿಣದ ಸಲಾಕೆ ಎದ್ದು ಕಾಣುತ್ತಿದೆ. ಉಳಿದ ಸ್ಲಾ ್ಯಬ್ ಕೂಡಾ ಮುರಿದು ಹೋಗುವ ಮುನ್ನವೇ ಇದನ್ನು ದುರಸ್ತಿಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.






