ತೃಶೂರು: ತಾಯಿಯ ಚಿನ್ನಾಭರಣಗಳನ್ನು ಲಪಟಾಯಿಸಲು ಮಗಳು ತನ್ನ ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಘಟನೆ ನಡೆದಿದೆ. ತೃಶೂರು ಮುಂ ಡೂರು ನಿವಾಸಿ ತಂಗಮಣಿ (75) ಕೊಲೆಗೀಡಾಗಿದ್ದು, ಈ ಸಂಬಂಧ ಮಗಳು ಸಂಧ್ಯ (45), ಈಕೆಯ ಪ್ರಿಯತಮ ನಿತಿನ್ (27) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ತಂಗಮಣಿಯ ಚಿನ್ನಾಭರಣ ಗಳನ್ನು ಲಪಟಾಯಿಸಲು ಮಗಳು ಪ್ರಿಯತ ಮನೊಂದಿಗೆ ಸೇರಿ ಈ ಕೃತ್ಯವೆ ಸಗಿದ್ದಾ ಳೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶನಿವಾರ ಬೆಳಿಗ್ಗೆ ತಂಗಮ ಣಿಯನ್ನು ಕೊಲೆಗೈಯ್ಯಲಾಗಿದೆ. ಅಂದು ರಾತ್ರಿ ಹಿತ್ತಿಲಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ತಾಯಿ ಬಿದ್ದು ತಲೆಗೆ ಏಟು ತಗಲಿ ಸಾವಿಗೀಡಾಗಿರುವುದಾಗಿ ಮಗಳು ತಿಳಿಸಿದ್ದಳು. ಮೃತದೇಹದ ಮರಣೋತ್ತರ ಪರೀಕ್ಷೆ ವೇಳೆ ಇದು ಕೊಲೆಕೃತ್ಯವಾಗಿದೆಯೆಂದು ತಿಳಿದುಬಂದಿದೆ. ಅಲ್ಲದೆ ತಂಗಮಣಿ ಧರಿಸಿದ್ದ ಚಿನ್ನಾಭರಣಗಳು ನಾಪತ್ತೆ ಯಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಇದರಂತೆ ಸಂಧ್ಯಾಳನ್ನು ಪೊಲೀಸರು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ತಂಗಮ ಣಿಯ ಏಕೈಕ ಮಗಳಾಗಿದ್ದಾಳೆ ಸಂಧ್ಯಾ. ಸಂಧ್ಯಾಳಿಗೆ ಪತಿ ಹಾಗೂ ಓರ್ವ ಪುತ್ರನಿದ್ದಾನೆ. ಅವಿವಾಹಿತ ನಾದ ನಿತಿನ್ ಸೆರೆಮನೆ ನಿವಾಸಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾನೆ.






