ಕಾಸರಗೋಡು: ವಿವಿಧ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಪ್ರಥಮವಾಗಿ ಜಿಲ್ಲೆಗೆ ತಲುಪುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭಾಗವಹಿಸುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಡಿಸಿಸಿ ಕಚೇರಿಯಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಸಮಿತಿ ನಾಯಕತ್ವ ಸಭೆ ತೀರ್ಮಾನಿಸಿದೆ. ಈ ತಿಂಗಳ 9, 1೦ರಂದು ಆರೋಗ್ಯ, ದೇವಸ್ವಂ ಇಲಾಖೆ ಸಚಿವ ಕೆ. ಮುರಳೀಧರನ್, 1೦ರಂದು ಸಾಂಸ್ಕೃತಿಕ, ಪ್ರವಾಸೋದಮ ಇಲಾಖೆ ಸಚಿವ ವಿಷ್ಣುನಾಥ್, ೧೬ರಂದು ಕೆಪಿಸಿಸಿ ಅಧ್ಯಕ್ಷ, ವಿದ್ಯುತ್ ಇಲಾಖೆ ಸಚಿವ ಸಣ್ಣಿ ಜೋಸೆಫ್, ೨೦ರಂದು ಸಹಕಾರಿ ವಾರಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹಕಾರಿ, ಅಬಕಾರಿ ಇಲಾಖೆ ಸಚಿವ ಎಂ. ಲಿಜು ಜಿಲ್ಲೆಗೆ ತಲುಪುವರು.
ಅಲ್ಲದೆ ೧೩ರಂದು ಯೂತ್ ಕಾಂ ಗ್ರೆಸ್ ರಾಜ್ಯಾಧ್ಯಕ್ಷ, ಯುವಜನ ಕ್ಷೇಮ ಕ್ರೀಡಾ ಇಲಾಖೆ ಸಚಿವ ಒ.ಜೆ. ಜನೀಶ್ರ ನೇತೃತ್ವದಲ್ಲಿ ಕಾಞಂಗಾಡ್ ನಲ್ಲಿ ನಡೆಯುವ ಜನ್ ಇಂಡಿಯ ಮೂವ್ಮೆಂಟ್ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಸಭೆ ತೀರ್ಮಾನಿ ಸಿದೆ. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರನ್ ಸ್ವಾಗತಿಸಿದರು. ಕೆಪಿಸಿಸಿ ಸದಸ್ಯೆ ಮೀನಾಕ್ಷಿ ಬಾಲಕೃಷ್ಣನ್, ಡಿಸಿಸಿ ಪದಾಧಿಕಾರಿಗಳಾದ ಸೋಮಶೇಖರ ಶೇಣಿ, ಮಾಮುನಿ ವಿಜಯನ್, ಟೋಮಿ ಪ್ಲಾಚೇರಿ, ಗೀತಾಕೃಷ್ಣನ್, ಡಾ. ಕೆ.ವಿ. ಶಶಿಧರನ್, ಕೆ. ಖಾಲಿದ್, ರಾಜನ್ ಪೆರಿಯ, ಕೆ. ಬಲರಾಮನ್ ನಂಬ್ಯಾರ್, ನ್ಯಾಯವಾದಿ ಶ್ರೀಜಿತ್ ಮಾಡಕ್ಕಲ್, ಕೆ. ಲಕ್ಷ್ಮಣ ಪ್ರಭು, ಥೋಮಸ್ ಮ್ಯಾಥ್ಯು, ಕೆ.ವಿ. ವಿಜಯನ್ ಮಾತನಾಡಿದರು.





