ಸಂಸ್ಕೃತದಲ್ಲಿ ಮಾತನಾಡಲು ಅರಿಯದ ವ್ಯಕ್ತಿಗೆ ಸಂಸ್ಕೃತ ಪಿಎಚ್‌ಡಿ ನೀಡಲೆತ್ನ: ತಡೆದ ಡೀನ್

ತಿರುವನಂತಪುರ: ಸಂಸ್ಕೃತ ಭಾಷೆಯಲ್ಲಿ ಮಾತನಾಡಲು ಅರಿಯದ ಎಸ್‌ಎಫ್‌ಐ ನೇತಾರನಿಗೆ ಸಂಸ್ಕೃತದಲ್ಲಿ ಪಿಎಚ್‌ಡಿ ನೀಡಲು ನಡೆಸಲಾದ ಯತ್ನವನ್ನು ಕೇರಳ ವಿಶ್ವವಿದ್ಯಾಲಯದ ಓರಿಯೆಂಟಲ್ ಭಾಷೆ ವಿಭಾಗದ ಡೀನ್ ತಡೆದಿದ್ದಾರೆ. ಮಾತ್ರವಲ್ಲ ಈ ವಿಷಯವನ್ನು ಅವರು ಪ್ರಸ್ತುತ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ನವಂಬರ್ 2ರಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭ ನಡೆಯಲಿದ್ದು, ಅದರಲ್ಲಿ ಈ ವಿಷಯವನ್ನು ಪರಿಶೀಲಿಸುವಂತೆ ಮುಖ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಶಿಫಾರಸ್ಸು ಮಾಡಿದ್ದಾರೆ.

ಮಾತ್ರವಲ್ಲ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಇನ್ನೊಂದೆಡೆ ಉಪಕುಲಪತಿ ನಿರ್ದೇಶವನ್ನೂ ನೀಡಿದ್ದಾರೆ.  ಪ್ರಸ್ತುತ ವಿಶ್ವವಿದ್ಯಾಲ ಯದ ಕ್ಯಾಂಪಸ್‌ನ ಎಸ್‌ಎಫ್‌ಐ ನೇತಾರ ವಿಪಿನ್ ವಿಜಯನ್ ಎಂಬ ಸಂಶೋಧನಾ ವಿದ್ಯಾರ್ಥಿ ಸಂಸ್ಕೃತದಲ್ಲಿ ಡಾಕ್ಟರೇಟ್‌ಗಾಗಿ ತಯಾರಿಸಿದ ಪ್ರಬಂಧದ ಮೌಲ್ಯ ನಿರ್ಣಯ ನಡೆಸಲು ಹಾಗೂ ಸಂಸ್ಕೃತದಲ್ಲಿ ಅವರ ಪಾಂಡಿತ್ಯದ ಬಗ್ಗೆ ಅಕ್ಟೋಬರ್ ೫ರಂದು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ನೇತಾರ ಸಂಸ್ಕೃತದಲ್ಲಿ ಸರಿಯಾಗಿ ಮಾತನಾಡಲು ಬರುತ್ತಿಲ್ಲವೆಂದು ಗಮನಕ್ಕೆ ಬಂದಿದೆಯೆಂದು ಅಂದು ನಡೆದ ಓಪನ್ ಡಿಫೆನ್ಸ್ ಸಂವಾದದಲ್ಲಿ ಭಾಗವಹಿಸಿದ್ದ ಪ್ರಸ್ತುತ ವಿಭಾಗದ ಮುಖ್ಯಸ್ಥರೂ ಆಗಿರುವ ಡೀನ್ ಅವರು ಪ್ರಸ್ತುತ ವಿವಿಯ ಉಪಕುಲಪತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ವಿಷಯದಲ್ಲಿ ಉಪಕುಲಪತಿಯವರು ಕೈಗೊಳ್ಳುವ ತೀರ್ಮಾನ ಅಂತಿಮವಾಗಲಿದೆ.

You cannot copy contents of this page