ಆರಿಕ್ಕಾಡಿ ಟೋಲ್ ಪ್ಲಾಜಾ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ: 14ರಿಂದ ಅನಿರ್ಧಿಷ್ಟಾವಧಿ ಮುಷ್ಕರ

ಕುಂಬಳೆ: ಆರಿಕ್ಕಾಡಿ ಕಡವತ್ ರಾಷ್ಟ್ರೀಯ ಹೆದ್ದಾರಿಯಲ್ಲಿ  ಟೋಲ್ ಪ್ಲಾಜಾ ನಿರ್ಮಿಸುವುದರ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ನಿನ್ನೆ ಕುಂಬಳೆಯಲ್ಲಿ ನಡೆದ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.ಟೋಲ್ ಪ್ಲಾಜಾ ನಿರ್ಮಾಣ ವಿರುದ್ಧ ಈ ತಿಂಗಳ 14ರಿಂದ ಆರಿಕ್ಕಾಡಿಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ಟೋಲ್ ಪ್ಲಾಜಾ ನಿರ್ಮಾಣವನ್ನು ಯಾವುದೇ ಬೆಲೆ ತೆತ್ತಾದರೂ ತಡೆಯುವುದಾಗಿಯೂ ಅದಕ್ಕೆ  ಸಾರ್ವಜನಿಕರು ಸಹಕಾರ ನೀಡಬೇಕೆಂದೂ ಸಂಬಂಧಪಟ್ಟವರು ತಿಳಿಸಿದ್ದಾರೆ. ಕುಂಬಳೆಯ ಹೋಟೆಲ್‌ವೊಂದರಲ್ಲಿ ನಿನ್ನೆ ನಡೆದ ಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್, ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ, ವಿವಿಧ ಪಕ್ಷಗಳ ನೇತಾರರಾದ ಮಾಹಿನ್ ಕೇಳೋಟ್, ಎ.ಕೆ. ಆರಿಫ್, ಸಿ.ಎ. ಸುಬೈರ್, ಅಶ್ರಫ್ ಕಾರ್ಳೆ, ಅಜೀಜ್ ಕಳತ್ತೂರು, ಲಕ್ಷ್ಮಣ ಪ್ರಭು, ಕೆ.ಬಿ. ಯೂಸುಫ್ ಮೊದಲಾದವರು ಭಾಗವಹಿಸಿದರು.

RELATED NEWS

You cannot copy contents of this page