ಕಾಸರಗೋಡು: ರಾಷ್ಟ್ರೀಯ ಸೇವಾ ಭಾರತಿ ನಗರ ಘಟಕದ ನೂತನ ಆಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಜರಗಿತು. ಕಾಸರಗೋಡು ಜನಾರ್ದನ (ಡ್ರೀಂ ಫ್ಲವರ್ ಐವಿಎಫ್ ಸೆಂಟರ್) ಆಸ್ಪತ್ರೆಯ ಡಾ| ಜಯಲಕ್ಷ್ಮಿ ಸೂರಜ್‌ರ ತಂದೆ ಡಾ| ವಿ.ಎಂ. ವಿಜಯನ್ ಅವರ ಸ್ಮರಣಾರ್ಥ ಆಂಬುಲೆನ್ಸ್ ಹಸ್ತಾಂತರಿಸಲಾಗಿದೆ. ತಾಯಿ ಮಣಿ ಬೆನ್ ವಿಜಯನ್ ಸೇವಾ ಭಾರತಿಯ ಜಿಲ್ಲಾಧ್ಯಕ್ಷ ದಿನೇಶ್ ಎಂ.ಟಿ ಅವರಿಗೆ ಆಂಬುಲೆನ್ಸ್ ಹಸ್ತಾಂತರಿಸಿದರು. ಈ ವೇಳೆ ಡಾ| ಜಯಲಕ್ಷ್ಮಿ ಸೂರಜ್, ಡಾ| ಸೂರಜ್ ಉಪಸ್ಥಿತರಿದ್ದರು. ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ್ ಪವಿತ್ರನ್ ಕುದ್ರೆಪ್ಪಾಡಿ, ಜಿಲ್ಲಾ ಸಂಪರ್ಕ ಪ್ರಮುಖ್ ಸುನಿಲ್ ಕುದ್ರೆಪ್ಪಾಡಿ, ರಾಮಕೃಷ್ಣ ಹೊಳ್ಳ, ದಿವ್ಯಾ, ಎನ್. ಸತೀಶ್, ರವಿ ಕೇಸರಿ, ಬಾಲಕೃಷ್ಣ, ಅಜೀಶ್,ಉಮೇಶ್, ದಯಾನಂದ ಭಟ್, ಸಂತೋಷ್, ವಿನಿಲ್, ಸೌಮ್ಯ, ಶ್ರೀಚಂದ್, ಸೇವಾ ಭಾರತಿ ನಗರಸಮಿತಿ ಅಧ್ಯಕ್ಷ ಸುಜಿತ್ ಕುಮಾರ್, ಜಿಲ್ಲಾ ಕೋಶಾಧಿಕಾರಿ ಶ್ರೀಜಾ, ಶ್ರೀಕಾಂತ್, ನಗರ ಪ್ರಧಾನ ಕಾರ್ಯದರ್ಶಿ ಸಂದೇಶ್ ಕೇಳುಗುಡ್ಡೆ, ಆರ್‌ಎಸ್‌ಎಸ್ ಖಂಡ್ ಸೇವಾ ಪ್ರಮುಖ್ ಜಯಕುಮಾರ್ ಭಾಗವಹಿಸಿದರು.






