ಹೊಸದುರ್ಗ: 33ರ ಹರೆಯದ ಯುವತಿಯನ್ನು ಮಾನಭಂಗಗೈದಿರುವುದಾಗಿ ನೀಡಿದ ದೂರಿನಲ್ಲಿ ೩೦ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಡೈಲಕ್ಕಾಡ್ ನಿವಾಸಿಯಾದ ಗೋಕುಲ್ (30)ನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ವಿವಾಹ ಭರವಸೆ ನೀಡಿ ಮಾನಭಂಗಗೈದಿರುವುದಾಗಿ ದೂರಲಾಗಿತ್ತು. ಆದರೆ ಬಳಿಕ ಇದರಿಂದ ಹಿಂದೆ ಸರಿದಿದ್ದು,
ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ಅಪರಿಮಿತ ನಿದ್ರೆ ಮಾತ್ರೆ ಸೇವಿಸಿದ ಯುವತಿಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಲುಪಿ ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆ ಬಳಿಕ ಗೋಕುಲ್ ವಿರುದ್ಧ ಕೇಸು ದಾಖಲಿಸಲಾಗಿದೆ.







