ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ನಡೆದ ಜನ್ ಸುನಾಯಿ (ಜನಸ್ಪಂದನ) ಕಾರ್ಯಕ್ರಮ ಸಂದರ್ಭದಲ್ಲಿ ವ್ಯಕ್ತಿಯೋರ್ವ ಅವರ ಕೆನ್ನೆಗೆ ಹೊಡೆದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ೩೦ರ ಹರೆಯದ ಯುವಕನೋರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಈ ಯುವಕ ಮುಖ್ಯಮಂ ತ್ರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಅವರ ಕೆನ್ನೆಗೆ ಹೊಡೆದಿದ್ದಾನೆನ್ನ ಲಾಗಿದೆ. ಆರೋಪಿಯು ಮೊದಲು ಮುಖ್ಯಮಂತ್ರಿಗೆ ದಾಖಲೆಪತ್ರ ಗಳನ್ನು ಹಸ್ತಾಂತರಿಸಿ ನಂತರ ಕಿರು ಚಲು ಆರಂಭಿಸಿ ಕೆನ್ನೆಗೆ ಹೊಡೆ ದನೆಂದು ಆರೋಪಿಸಲಾಗಿದೆ. ಸಿವಿಲ್ ಲೈನ್ಸ್ ಪೊಲೀಸರು ತಕ್ಷಣ ಆತನನ್ನು ಸೆರೆಹಿಡಿದು ಠಾಣೆಗೊ ಯ್ದಿದ್ದಾರೆ. ಮುಖ್ಯಮಂತ್ರಿ ರೇಖಾ ಗುಪ್ತರ ಮೇಲೆ ನಡೆದ ದಾಳಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಲ್ಲೆಗಾರನ ಹಿಂದೆ ರಾಜಕೀಯ ವಿರಬಹುದೆಂದು ಬಿಜೆಪಿ ಆರೋ ಪಿಸಿದೆ. ಮಾತ್ರವಲ್ಲ ಮುಖ್ಯಮಂತ್ರಿ ಯವರ ಮನೆಯಲ್ಲೇ ನಡೆದ ಈ ಘಟನೆ ಭದ್ರತಾ ವೈಫಲ್ಯವನ್ನೂ ತೋರಿಸುತ್ತಿದೆ. ಮಾತ್ರವಲ್ಲ ಅದು ಭಾರೀ ಚರ್ಚೆಗೂ ದಾರಿಮಾಡಿ ಕೊಟ್ಟಿದೆ. ದಾಳಿಯ ಹಿಂದೆ ರಾಜ ಕೀಯ ಪಿತೂರಿ ನಡೆದಿದೆಯೆಂದು ಆ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸ ಬೇಕೆಂದು ಬಿಜೆಪಿ ಆಗ್ರಹಪಟ್ಟಿದೆ.
