ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ರಸ್ತೆ ಹಲವು ವರ್ಷಗಳಿಂದ ಶೋಚನೀಯಾವಸ್ಥೆಯಲ್ಲಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯನ್ನು ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಉಪ್ಪಳ ಪೇಟೆಯಿಂದ ರೈಲ್ವೇ ನಿಲ್ದಾಣ ತನಕದ ಸುಮಾರು ಒಂದು ಕಿಲೋ ಮೀಟರ್ ಕಾಂಕ್ರೀಟ್ ಹಾಗೂ ಡಾಮರು ರಸ್ತೆ ಹದಗೆಟ್ಟು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯ ಮೇಲ್ಬಾಗ ಪಂಚಾಯತ್ ಹಾಗೂ ಕೆಳ ಭಾಗ ರೈಲ್ವೇ ಇಲಾಖೆಗೆ ಸೇರಿದೆ. ರಸ್ತೆಯ ಚರಂಡಿಯನ್ನು ನವೀಕರಿಸುವ ಕೆಲಸ ನಡೆಯುತ್ತಿದೆ. ಈ ಪ್ರದೇಶದಲ್ಲಿ ರೈಲ್ವೆ ನಿಲ್ದಾಣ, ಅಯ್ಯಪ್ಪ ಮಂದಿರ, ನೂರಾರು ಮನೆಗಳು, ವ್ಯಾಪಾರ ಸಂಸ್ಥೆಗಳು ಇದ್ದು, ದಿನನಿತ್ಯ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿ ದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರ ಸುಗಮಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.







