ಕಾಸರಗೋಡು: ಚುನಾವಣೆಗೆ ಸಂಬಂಧಿಸಿ ಬಿಎಲ್ಒಗಳ ಮೂಲಕ ಮತದಾರರಿಗೆ ನೀಡುವ ಎನ್ಯುಮರೇಷನ್ ಫಾರ್ಮ್ ಮಲೆಯಾಳದಲ್ಲಿ ಮಾತ್ರವೇ ಲಭಿಸುತ್ತಿದ್ದು, ಇದನ್ನು ಕನ್ನಡದಲ್ಲಿ ವಿತರಿಸಲು ಆಗ್ರಹ ತೀವ್ರಗೊಂಡಿದೆ. ವಿವಿಧ ಸಂಘಟನೆಗಳು ಕನ್ನಡದಲ್ಲಿ ಫಾರ್ಮ್ ವಿತರಿಸಲು ಆಗ್ರಹಿಸಿದ್ದು ಅಧಿಕಾರಿಗಳ ನಿಲುವನ್ನು ಖಂಡಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಜನರು ಕನ್ನಡ ಭಾಷೆ ತಿಳಿದವರಾಗಿದ್ದು, ಮಲಯಾಳ ಫಾರ್ಮ್ ಓದಲು, ಬರೆಯಲು ತಿಳಿಯದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಫಾರ್ಮ್ ಭರ್ತಿಗೊಳಿಸುವಾಗ ತಪ್ಪುಗಳು ಸಂಭವಿಸಿದರೆ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕಾಗಿ ಬರಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಮಲೆಯಾಳಂ ಜೊತೆಗೆ ಕನ್ನಡದಲ್ಲೂ ಫಾರ್ಮ್ ಮುದ್ರಿಸಿ ವಿತರಿಸಬೇಕು ಎಂದು ಆಗ್ರಹಿಸಲಾಗಿದೆ. ಈ ಬಗ್ಗೆ ಬಾಕುಡ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ತುಳಸೀದಾಸ್ ಮಂಜೇಶ್ವರ ಪ್ರಕಟಣೆಯಲ್ಲಿ ಮಲಯಾಳ ಫಾರ್ಮ್ನ್ನು ಸ್ವೀಕರಿಸದೆ ಕನ್ನಡಿಗರು ತಿರಸ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
ಹೊಸಂಗಡಿ: ಜಿಲ್ಲೆಯ ಮಂಜೇಶ್ವರ ತಾಲೂಕಿ ಗೊಳಪಟ್ಟ ಮೀಂಜ, ವರ್ಕಾಡಿ, ಮಂಜೇಶ್ವರ, ಪೈವಳಿಕೆ, ಮಂಗಲ್ಪಾಡಿ, ಪುತ್ತಿಗೆ, ಕುಂಬಳೆ, ಎಣ್ಮಕಜೆ ಪಂಚಾಯತ್ಗಳಲ್ಲಿ ಅತ್ಯಧಿಕ ಮಂದಿ ಕನ್ನಡಿಗರಿದ್ದು, ಮಲಯಾಳ ಎನ್ಯುಮರೇಷನ್ ಫಾರ್ಮ್ನಿಂದ ಸಮಸ್ಯೆಯಾಗುತ್ತಿದೆ ಎಂದು ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ತಿಳಿಸಿದ್ದಾರೆ. ಈ ಬಗ್ಗೆ ಕನ್ನಡದಲ್ಲೂ ಫಾರ್ಮ್ ಮುದ್ರಿಸಿ ವಿತರಿಸಲು ಜಿಲ್ಲಾಧಿಕಾರಿಯವರಲ್ಲಿ ಅವರು ವಿನಂತಿಸಿದ್ದಾರೆ.
ಕುಂಬ್ಡಾಜೆ: ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಅಂಗವಾಗಿ ನೀಡುತ್ತಿರುವ ಎನ್ಯುಮರೇಷನ್ ಫಾರ್ಮ್ ಕನ್ನಡದಲ್ಲಿಯೇ ವಿತರಿಸಬೇಕು ಎಂದು ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಆಗ್ರಹಿಸಿದ್ದಾರೆ. ಕುಂಬ್ಡಾಜೆ ಪಂಚಾಯತ್ನಲ್ಲಿ ಕನ್ನಡಿಗರು ಅತ್ಯಧಿಕವಿದ್ದು, ಮಲಯಾಳ ಭಾಷೆಯ ಫಾರ್ಮ್ ವಿತರಿಸಿದರೆ ಭರ್ತಿಗೊಳಿಸಲು ವಿಫಲವಾಗಿ ಮತದಾರ ಯಾದಿಯಿಂದ ಹೊರಗಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದು, ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕನ್ನಡದ ಅವಗಣನೆಗೆ ಕ.ಸಾ.ಪ. ಖಂಡನೆ
ಕಾಸರಗೋಡು: ಮತದಾರ ಪಟ್ಟಿ ತೀವ್ರ ಪರಿಷ್ಕರಣೆಯ ಎಲ್ಲಾ ಸೂಚನೆ, ನಿರ್ದೇಶನ, ಫಾಮïð ಗಳನ್ನು ಕಾಸರಗೋಡಿನ ಕನ್ನಡಿ ಗರಿಗೆ ಕನ್ನಡದಲ್ಲಿಯೇ ಒದಗಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಒತ್ತಾಯಿಸಿದೆ. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನ ನೀಡಿರುವ ಹಕ್ಕುಗಳನ್ನು ಕಡೆಗಣಿಸಿ ಕನ್ನಡಿಗರಿಗೆ ಮಲಯಾಳ ಭಾಷೆಯ ಫಾಮïðಗಳನ್ನು ವಿತರಿಸುತ್ತಿರು ವುದನ್ನು ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸಿದೆ. ಪರಿಷ್ಕರಣೆಯ ಕರ್ತವ್ಯದಲ್ಲಿರುವ ಕನ್ನಡ ಅಧ್ಯಾಪಕರಿಗೆ ಮತ್ತು ಕನ್ನಡ ಮತದಾರರಿಗೆ ಆಗುವ ಅನ್ಯಾಯವನ್ನು ಕೂಡಲೇ ಪರಿಹರಿಸಬೇಕೆಂದು ಕ.ಸಾ.ಪ ಕೇರಳ ಗಡಿನಾಡ ಘಟಕ ಒತ್ತಾಯಿಸಿದೆ.







