ಕಾಸರಗೋಡು: ಕಾಸರಗೋಡು -ಮುಂಡಿತ್ತಡ್ಕ ರಸ್ತೆ ಮಳೆಗಾಲದ ಬಳಿಕ ತೀವ್ರ ಶಿಥಿಲಗೊಳ್ಳತೊಡ ಗಿದ್ದು, ರಸ್ತೆಯ ಮಧ್ಯ ಭಾಗ ಮತ್ತು ಇಕ್ಕೆಡೆಗಳಲ್ಲಿ ಭಾರೀ ಹೊಂಡಗಳು ರೂಪುಗೊಂಡಿದ್ದು, ಅದು ಸಾರಿಗೆ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸತೊಡಗಿದೆ. ಈ ರೂಟ್‌ಗಳಲ್ಲಿ ದೈನಂದಿನ ಹಲವು ಖಾಸಗಿ ಬಸ್‌ಗಳು ಅತ್ತಿತ್ತ ಸೇವೆ ನಡೆಸುತ್ತಿವೆ. ರಸ್ತೆ ಹೊಂಡಗಳಿಂದ ತುಂಬಿ ತುಳುಕುತ್ತಿರುವುದರಿಂದಾಗಿ ಬಸ್‌ಗಳು ಕುಪ್ಪಳಿಸಿಕೊಂಡು ಸಾಗಬೇಕಾದ ಸ್ಥಿತಿ ಉಂಟಾಗಿದೆ. ಮಾತ್ರವಲ್ಲ ಇದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸಬೇಕಾಗಿ ಬರುತ್ತಿದೆ. ಇದರ ಹೊರತಾಗಿ ಇಂತಹ ರಸ್ತೆಯಲ್ಲಿ ಸೇವೆ ನಡೆಸುವ ಬಸ್‌ಗಳೂ ಹಾನಿಗೊಳಗಾಗಿ ಅದರಿಂದಾಗಿ ಬಸ್‌ಗಳ ಸೇವೆ ಪದೇ ಪದೇ ಮೊಟಕುಗೊಳಿಸಿ ಗ್ಯಾರೇಜ್ ಸೇರಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಶೀಘ್ರ ಗಮನ ಹರಿಸಿ ರಸ್ತೆಯ ದುರಸ್ತಿ ಕೆಲಸ ನಡೆಸಬೇಕೆಂದು ಈ ರೂಟ್‌ನಲ್ಲಿ ಸೇವೆ ನಡೆಸುತ್ತಿರುವ ಖಾಸಗಿ ಬಸ್ ಮಾಲಕರು ಮತ್ತು ಸಿಬ್ಬಂದಿಗಳು ಆಗ್ರಹಪಡುತ್ತಿದ್ದಾರೆ.
