ನಾರಂಪಾಡಿಯ ಹಳ್ಳಕ್ಕೆ ಮಣ್ಣು ತುಂಬಿಸಿ ನಾಶ: ಲೋಡುಗಟ್ಟಲೆ ಮಣ್ಣು ತಂದು ಹಾಕಿದ ಬಗ್ಗೆ ಆರೋಪ

ಬದಿಯಡ್ಕ: ಬಹಳ ಕಾಲದಿಂದ ನೆಲೆಗೊಂಡಿದ್ದ ನಾರಂಪಾಡಿಯ ಒಂದು ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಹಳ್ಳ ವನ್ನು ಮಣ್ಣು ತುಂಬಿಸಿ ಸಮತಟ್ಟುಗೊಳಿ ಸಲಾಗುತ್ತಿದೆ. ಈ ಹಳ್ಳಕ್ಕೆ ಮಣ್ಣು ತುಂಬಿಸಿದರೆ ಸಮೀಪದ ಪ್ರದೇಶಗಳಲ್ಲೆಲ್ಲಾ ಕುಡಿಯುವ ನೀರಿಗೆ ಕ್ಷಾಮ ತೀವ್ರಗೊಳ್ಳಬಹುದೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. 2013ರಲ್ಲಿ ಈ ಹಳ್ಳವನ್ನು ಮುಚ್ಚಲು ಮೊದಲ ಯತ್ನ ನಡೆದಿತ್ತೆಂದು ಸ್ಥಳೀಯರು ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಅಡೂರು ಪ್ರಕಾಶ್‌ರಿಗೆ ಸ್ಥಳೀಯರು ಬೃಹತ್ ಅರ್ಜಿ ಸಮರ್ಪಿಸಿದ್ದರು.

ಹಳ್ಳ ಇರುವ ಸ್ಥಳಕ್ಕೆ ಪಟ್ಟಾ ಲಭಿಸಿದೆ ಎಂದು ಭೂಮಿ ಸ್ವಾಧೀನ ಪಡಿಸಿದವರು ನುಡಿಯುತ್ತಿರುವುದಾಗಿ ಹೇಳಲಾಗುತ್ತಿದೆ. ಮನವಿಯ ಹಿನ್ನೆಲೆ ಯಲ್ಲಿ ಹಳ್ಳವನ್ನು ಸರಕಾರ ನಿಯಂತ್ರ ಣಕ್ಕೆ ತೆಗೆದುಕೊಂಡಿತ್ತೆಂದು, ಅದರ ಬಳಿಕ ಆ ಸ್ಥಳವನ್ನು ಹಲವರಿಗಾಗಿ ವಿಂಗ ಡಿಸಿ ನೀಡಿರುವುದಾಗಿಯೂ ಸ್ಥಳೀಯರು ದೂರುತ್ತಾರೆ. ಆದರೆ ವಿಲ್ಲೇಜ್ ಕಚೇರಿಯಲ್ಲಿರುವವರು ಈ ಬಗೆಗಿನ ವಿಷಯವನ್ನು ರಹಸ್ಯವಾಗಿರಿಸಿದ್ದಾರೆನ್ನ ಲಾಗಿದೆ. ೨೦೧೩ರಲ್ಲಿ  ಮಣ್ಣು ತುಂಬಿಸಿದ ಕಾರಣ ವರ್ಷ ಪೂರ್ತಿ ನೀರು ತುಂಬಿಕೊಂಡಿದ್ದ ಸ್ಥಳದಲ್ಲಿ ಈಗ ಮಳೆಗಾಲದಲ್ಲಿ ಮಾತ್ರವೇ ನೀರು ಕಂಡು ಬರುತ್ತಿದ್ದು, ಮಾರ್ಚ್ ತಿಂಗಳ ಬಳಿಕ ಅದು ಬತ್ತಿಹೋಗುತ್ತದೆ. ನೀರು ಬತ್ತುವಾಗ ಸ್ಥಳೀಯರಾದ ಯುವಕರು ಈ ಹಳ್ಳವನ್ನು ಕ್ರಿಕೆಟ್ ಆಟಕ್ಕಾಗಿ ಉಪಯೋಗಿಸುತ್ತಿದ್ದಾರೆಂದು ಸ್ಥಳೀಯರು ತಿಳಿಸುತ್ತಿದ್ದಾರೆ.

ಈ ಮಧ್ಯೆ ಮೊನ್ನೆ ರಾತ್ರಿ ೫೦ರಷ್ಟು ಲೋಡ್ ಮಣ್ಣು ತಂದು ಹಳ್ಳದ ಒಂದು ಭಾಗಕ್ಕೆ ಹಾಕಿರುವುದಾಗಿ ಹೇಳಲಾಗು ತ್ತಿದೆ. ಈ ಬಗ್ಗೆ ವಿಲ್ಲೇಜ್ ಅಧಿಕಾರಿ ಹಾಗೂ ತಹಶೀಲ್ದಾರ್‌ರಿಗೆ ತಿಳಿಸಲಾ ಗಿದೆ. ಜಿಲ್ಲಾಧಿಕಾರಿಗೂ, ಕಂದಾಯ ಸಚಿ ವರಿಗೂ ಮನವಿ ನೀಡುವುದಾಗಿಯೂ ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು ಹಲವು ಕಾಲದಿಂದ ಈ ಹಳ್ಳದ ನೀರನ್ನೇ ದೈನಂದಿನ ಕಾರ್ಯಗಳಿಗೆ ಉಪಯೋಗಿಸುತ್ತಿದ್ದರೆನ್ನಲಾಗಿದೆ. ಸಾಕುಪ್ರಾಣಿಗಳಿಗೆ ಕೂಡಾ ಈ ಹಳ್ಳದ ನೀರೇ ಆಶ್ರಯವಾಗಿತ್ತು. ಅಲ್ಲದೆ ಈ ಸಮೀಪ ಪ್ರದೇಶದ ಒರತೆಗೆ ಹಳ್ಳದಲ್ಲಿ ನೀರು ತುಂಬಿಕೊಂಡಿರುವುದು ಕಾರಣ ವಾಗಿತ್ತು. ಪ್ರಕೃತಿದತ್ತವಾದ ಹಾಗೂ ಸ್ಥಳೀಯರಿಗೆ ಉಪಕಾರಪ್ರದವಾಗಿದ್ದ ಹಳ್ಳವನ್ನು ಸಂರಕ್ಷಿಸಬೇಕೆಂದು, ಇದನ್ನು ಮಣ್ಣು ತುಂಬಿಸಿ ಇಲ್ಲದಂತೆ ಮಾಡುವ ಯತ್ನ ಕೈಬಿಡಬೇಕೆಂದು ಸ್ಥಳೀಯರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

You cannot copy contents of this page