ಬಂದ್ಯೋಡು: ಯೂತ್ ಕಾಂಗ್ರೆಸ್ ಮುಖಂಡನಾಗಿದ್ದ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಬಂದ್ಯೋಡ್‌ನಲ್ಲಿ ಪ್ರತಿಭಟನೆ ನಡೆಸಿತು. ಡಿಫಿ ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ ಉದ್ಘಾಟಿಸಿದರು. ದೀಕ್ಷಿತ್ ಉಪ್ಪಳ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಬ್ಲೋಕ್ ಕಾರ್ಯದರ್ಶಿ ವಿನಯ್ ಕುಮಾರ್ ಬಾಯಾರು, ಇಕ್ಬಾಲ್ ಪೆರಿಂಗಡಿ, ಇಕ್ಬಾಲ್ ಶಿರಿಯಾ ಮಾತನಾಡಿದರು. ನೌಶಾದ್ ಹೇರೂರು ಸ್ವಾಗತಿಸಿದರು.
