ಪೈವಳಿಕೆ: ಮಹಿಳೆಯರಿಗೆ ಲೈಂಗಿಕ ದೌರ್ಜನ್ಯಗೈದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ, ಯೂತ್ ಕಾಂಗ್ರೆಸ್ ನೇತಾರನಾಗಿದ್ದ ರಾಹುಲ್ ಮಾಕೂಟತ್ತಿಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್‌ಐ ಬಾಯಾರು ವಿಲ್ಲೇಜ್ ಸಮಿತಿ ವತಿಯಿಂದ ಬಾಯಾರುಪದವಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಡಿಫಿ ಮಂಜೇಶ್ವರ ಬ್ಲೋಕ್ ಕಾರ್ಯದರ್ಶಿ ವಿನಯಕುಮಾರ್ ಬಾಯಾರು ಉದ್ಘಾಟಿಸಿದರು. ಕಾರ್ತಿಕ್ ಬಾಯಾರು ಅಧ್ಯಕ್ಷತೆ ವಹಿಸಿದರು. ಪುರುಷೋತ್ತಮ ಬಳ್ಳೂರು, ಆಸ್ಪೀರ್ ಬಾಯಾರು, ಆಸಿಫ್ ಬಾಯಾರು ಮಾತನಾಡಿದರು. ಝಕಾರಿಯಾ ಬಾಯಾರು ಸ್ವಾಗತಿಸಿದರು.