ಕುಂಬಳೆ: ಮೂರು ವಾರಗಳ ಹಿಂದೆ ಗಲ್ಫ್‌ಗೆ ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟರು. ಬಂದ್ಯೋಡು ಪೆರ್ಮುದೆ ಪೆಟ್ರೋಲ್ ಬಂಕ್ ಸಮೀಪದ ಅಂದುಂಞಿ ಯವರ ಪುತ್ರ ಆದಂ ಕುಂಞಿ (49) ಮೃತ ವ್ಯಕ್ತಿ. ಇವರು ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ವೇಳೆ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇವರ ತಾಯಿ ಬೀಫಾತಿಮ ಈ ಹಿಂದೆ ನಿಧನರಾಗಿ ದ್ದಾರೆ. ಮೃತರು ಪತ್ನಿ ರಮ್ಲ, ಮಕ್ಕ ಳಾದ ತಸ್ನಿಂ, ಫಾತಿಮತ್ ರಿಫ, ಸಮೀಮ, ಸಹೋದರ- ಸಹೋ ದರಿಯರಾದ ಅಹಮ್ಮದಲಿ, ಅಬ್ದುಲ್ ಅಸೀಸ್,ಅಬ್ದುಲ್ ಲತೀಫ್, ಸೈನಬ, ಆಯಿಶ, ಸಕೀನ, ಸಾಹಿದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







