ಕಾಸರಗೋಡು: ಜಿಲ್ಲಾಧಿಕಾರಿಯ ನಿರ್ದೇಶವನ್ನು ಅವಗಣಿಸಿ ಟೆಲಿಕಾಂ ಕಂಪೆನಿ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಬದಿ ಕಾಲುದಾರಿಯಲ್ಲಿ ಹೊಂಡ ತೋಡುತ್ತಿರುವುದಾಗಿ ದೂರಲಾಗಿದೆ. ತೋಡಿದ ಹೊಂಡವನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಡುತ್ತಿರುವುದು ಪಾದಚಾರಿಗಳಿಗೆ ಅಪಾಯಭೀತಿ ಸೃಷ್ಟಿಸುತ್ತಿದೆ.
ಮೊಗ್ರಾಲ್ ಟೌನ್ ಜಂಕ್ಷನ್ ಲೀಗ್ ಕಚೇರಿ ಸಮೀಪ ಕಾಲುದಾರಿಯಲ್ಲಿ ಅಳವಡಿಸಿದ ಇಂಟರ್‌ಲಾಕ್ ತೆಗೆದು ಹೊಂಡ ತೋಡಲಾಗಿದೆ. ಹೊಂಡ ತೋಡಿ ವಯರ್, ಪೈಪ್‌ಗಳನ್ನು ಸ್ಥಾಪಿಸುವುದಾದಲ್ಲಿ ಕೆಲಸ ಮುಗಿದೊಡನೆ ಅದನ್ನು ಮುಚ್ಚ ಬೇಕೆಂದು ಜಿಲ್ಲಾಧಿಕಾರಿ ಈ ಹಿಂದೆಯೇ ಟೆಲಿಕಾಂ ಕಂಪೆನಿಗೆ ನಿರ್ದೇಶಿಸಿದ್ದರು. ಆದರೆ ಅದನ್ನು ಟೆಲಿಕಾಂ ಕಂಪೆನಿ ಅವಗಣಿಸುತ್ತಿದೆ. ಕುಂಬಳೆ ಪೇಟೆಯಲ್ಲಿ ಇದೇ ರೀತಿಯಲ್ಲಿ ರಸ್ತೆ ಬದಿ ಹೊಂಡ ತೋಡಿರುವುದರ ವಿರುದ್ಧ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪೆನಿಯು ಟೆಲಿಕಾಂ ಕಂಪೆನಿ ವಿರುದ್ಧ ದೂರು ನೀಡಿತ್ತು.