ಚೆಂಗಳದಲ್ಲಿ ಕಾಂಗ್ರೆಸ್- ಲೀಗ್ ಮಧ್ಯೆ ಭಿನ್ನಾಭಿಪ್ರಾಯ: 3ನೇ ವಾರ್ಡ್‌ನಲ್ಲಿ ಸ್ವತಂತ್ರ ಅಭ್ಯರ್ಥಿ ಲೀಗ್‌ನಿಂದ ಸ್ಪರ್ಧೆ

ಚೆಂಗಳ: ಹಲವು ಕಾಲದಿಂದ ಮುಸ್ಲಿಂ ಲೀಗ್ ಸ್ಪರ್ಧಿಸುತ್ತಿದ್ದ ಹಾಗೂ ಲೀಗ್‌ಗೆ ಅತ್ಯಂತ ಹೆಚ್ಚು ಸ್ವಾಧೀನವಿರುವ ಚೆಂಗಳ ಪಂಚಾಯತ್‌ನ 3ನೇ ವಾರ್ಡ್ ನಲ್ಲಿ ಈ ಬಾರಿ ಕಾಂಗ್ರೆಸ್ ಸ್ಪರ್ಧಿಸುತ್ತಿರು ವುದನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್, ಯೂತ್ ಲೀಗ್, ಎಂಎಸ್‌ಎಫ್ ಸಮಿತಿ ಸದಸ್ಯರು ಸದಸ್ಯತನಕ್ಕೆ ರಾಜೀ ನಾಮೆ ಸಲ್ಲಿಸಿದ್ದಾರೆ. ಮೇಲ್ಸಮಿತಿಯ ಕೆಲವು ನೇತಾರರ ಏಕಪಕ್ಷ ತೀರ್ಮಾ ನದ ವಿರುದ್ಧ ಈ ಪ್ರತಿಭಟನೆ ನಡೆಸಲಾ ಗಿದೆ. ಇದೇ ವೇಳೆ ಮುಸ್ಲಿಂ ಲೀಗ್ ಟೌನ್ ಸಮಿತಿಯ ಅಧ್ಯಕ್ಷನಾಗಿದ್ದ ಅಶ್ರಫ್ ಕೆ.ಡಿ.ಯವರ ಪತ್ನಿ ಫಾತಿಮತ್ ರಂಸೀನರನ್ನು ೩ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಾರ್ಯಕರ್ತರು ಘೋಷಿಸಿದ್ದಾರೆ.

೨೦೧೫ರ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ನ ವಾರ್ಡ್ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಮಯದಲ್ಲಿ ಕಾಂಗ್ರೆಸ್ ಮುಖಂಡ ಲೀಗ್ ಅಭ್ಯರ್ಥಿ ವಿರುದ್ಧ ರಿಬಲ್ ಆಗಿ ಸ್ಪರ್ಧಿಸಿ 9 ಮತದ ಅಂತರದಲ್ಲಿ ಸೋಲು ಕಂಡಿದ್ದರು. ಕಳೆದ ಬಾರಿ ಸೋಲಿಸಲು ಪ್ರಯತ್ನಿಸಿದವರ ಗುಂಪಿನಿಂದ ಈ ಬಾರಿ ಅಭ್ಯರ್ಥಿಗಳನ್ನು ನಿಲ್ಲಿಸಬಾರದೆಂದು ಹಲವು ಹಿರಿಯ ಮುಖಂಡರು ತಿಳಿಸಿದ್ದರೂ ಅದನ್ನು ಗಮನಕ್ಕೆ ತೆಗೆಯದೆ ಆ ಮುಖಂಡನ ಪತ್ನಿಯನ್ನೇ ಸ್ಪರ್ಧಾಳುವನ್ನಾಗಿ ಮಾಡಿರುವುದು ಲೀಗ್ ಕಾರ್ಯ ಕರ್ತರಲ್ಲಿ ರೋಷಕ್ಕೆ ಕಾರಣವಾಯಿತು. ಕಳೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬೂತ್ ಸಮಿತಿ ಕೂಡಾ ರೂಪಿಸದೆ ಪ್ರಚಾರ ಸಮಯದಲ್ಲಿ ಸಹಕರಿಸದ ಕಾಂಗ್ರೆಸ್‌ಗೆ ಸೀಟು ನೀಡಿರುವುದು  ಲೀಗ್ ಕಾರ್ಯಕರ್ತರಲ್ಲಿ ಪ್ರತಿಭಟನೆಗೆ ಹೇತುವಾಯಿತು.

RELATED NEWS

You cannot copy contents of this page