ಕೊಚ್ಚಿ: ಕೋಂದುರತ್ತಿಯಲ್ಲಿ ಮನೆಗಿರುವ ದಾರಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಜೋರ್ಜ್ ವಾಸಿಸುವ ಮನೆಯ ಮುಂಭಾಗದಲ್ಲಿ ಅರ್ಧ ನಗ್ನವಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪದಲ್ಲಿಯೇ ಜೋರ್ಜ್ ಮದ್ಯದಮಲಿನಲ್ಲಿ ಗೋಡೆಗೆ ಒರಗಿ ಕುಳಿತ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಈತನನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಮೃತಪಟ್ಟ ಮಹಿಳೆಯ ಗುರುತು ಇದುವರೆಗೆ ಪತ್ತೆಹಚ್ಚಲಾಗಲಿಲ್ಲ.
ಇಂದು ಬೆಳಿಗ್ಗೆ ೬.೩೦ರ ವೇಳೆ ನಾಡನ್ನು ಬೆಚ್ಚಿಸಿದ ಘಟನೆ ನಡೆದಿದೆ. ಬೆಳಿಗ್ಗೆ ಜೋರ್ಜ್ ಗೋಣಿ ಇದೆಯಾ ಎಂದು ಕೇಳಿಕೊಂಡು ತಲುಪಿರುವುದಾಗಿ ನೆರೆಮನೆ ನಿವಾಸಿಗಳು ತಿಳಿಸಿದ್ದಾರೆ. ಮನೆ ಹಿತ್ತಿಲಲ್ಲಿ ನಾಯಿಯೊಂದು ಸತ್ತಿರುವುದಾಗಿಯೂ ತಿಳಿಸಿ ಆತ ನೆರೆಮನೆಯವರಲ್ಲಿ ಗೋಣಿಗೆ ಆಗ್ರಹಿಸಿದ್ದನು. ಆದರೆ ಈತ ಮದ್ಯದಮಲಿನಲ್ಲಿದ್ದ ಕಾರಣ ಹಲವರು ಈತನನ್ನು ದೂರ ಅಟ್ಟಿದರು. ಬಳಿಕ ಸಮೀಪದ ಒಂದು ಅಂಗಡಿಯಿಂದ ಜೋರ್ಜ್ ಗೋಣಿ ಸಂಪಾದಿಸಿದ್ದನು. ಇದರ ಬೆನ್ನಲ್ಲೇ ಜೋರ್ಜ್‌ನ ಮನೆಗಿರುವ ದಾರಿಯಲ್ಲಿ ಗೋಣಿಯಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಹಸಿರು ಕ್ರಿಯಾಸೇನೆಯ ಸದಸ್ಯೆಯರು ಮೃತದೇಹವನ್ನು ಮೊದಲಾಗಿ ಕಂಡಿದ್ದರು. ಇವರು ವಾರ್ಡ್ ಕೌನ್ಸಿಲರ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಈ ವೇಳೆ ಮದ್ಯದಮಲಿನಲ್ಲಿದ್ದ ಜೋರ್ಜ್‌ನ್ನು ಕಸ್ಟಡಿಗೆ ತೆಗೆದಿದ್ದಾರೆ. ಈತನ ಬಾಡಿಗೆ ಮನೆಯಲ್ಲಿ ವಾಸವಿದ್ದ ಅನ್ಯರಾಜ್ಯ ಕಾರ್ಮಿಕರನ್ನು ಕೂಡಾ ಪೊಲೀಸರು ಪ್ರಶ್ನಿಸಿದ್ದಾರೆ.
ಮೃತಪಟ್ಟ ಮಹಿಳೆ ಸ್ಥಳೀಯ ನಿವಾಸಿಯಲ್ಲವೆಂದು ವಾರ್ಡ್ ಕೌನ್ಸಿಲರ್ ಹಾಗೂ ಸ್ಥಳೀಯರು ತಿಳಿಸುತ್ತಿದ್ದಾರೆ. ಮೃತದೇಹದಲ್ಲಿ ಗಾಯ ವಿದ್ದುದಾಗಿಯೂ ಸ್ಥಳೀಯರು ತಿಳಿಸಿದ್ದಾರೆ. ಜೋರ್ಜ್ ಹೋಂನರ್ಸ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯಾಗಿದ್ದಾನೆ. ಈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಪುತ್ರ ಯು.ಕೆಯಲ್ಲಿದ್ದು, ಪುತ್ರಿ ಪಾಲಾದಲ್ಲಿದ್ದಾಳೆ. ಪತ್ನಿ ಮನೆಯಲ್ಲಿರಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.







