ವರ್ಕಾಡಿ: ವರ್ಕಾಡಿ ಪಂಚಾ ಯತ್‌ನ 2025-26ನೇ ಸಾಲಿನ ವಾರ್ಷಿಕ ಯೋಜನೆಯಡಿ ಯಲ್ಲಿ ಕೃಷಿಕರಿಗೆ ಎಮ್ಮೆಕರು ವಿತರಣೆಯ ಎರಡನೇ ಹಂತದ ಕಾರ್ಯಕ್ರಮ ವರ್ಕಾಡಿ ಮೃಗಾಸ್ಪತ್ರೆಯ ಆವರಣದಲ್ಲಿ ಜರಗಿತು. ಪಂಚಾಯತ್ ಅಧ್ಯಕ್ಷ ಉಮ್ಮರ್ ಬೋರ್ಕಳ ಉದ್ಘಾಟನೆ ನೆರವೇರಿಸಿದರು. ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ ಅಧ್ಯಕ್ಷೆ ವಹಿಸಿದರು.
ಈ ಯೋಜನೆಯಡಿಯಲ್ಲಿ ಒಟ್ಟು 32 ಮಂದಿ ಕೃಷಿಕರಿಗೆ ಎಮ್ಮೆ ಕರುಗಳನ್ನು ನೀಡುವ ಗುರಿಯನ್ನು ಹೊಂದಲಾಗಿದ್ದು, ಅದರ ಎರಡನೇ ಹಂತವಾಗಿ ೧೫ ಮಂದಿಗೆ ವಿತರಿಸಲಾಯಿತು.
ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಪುರುಷೋತ್ತಮ, ಸದಸ್ಯರುಗಳಾದ ಚಂದ್ರಶೇಖರ್, ಗೋಪಾಲಕೃಷ್ಣ ಪಜ್ವ, ತುಳಸಿ ಕುಮಾರಿ, ಪಶು ವೈದ್ಯಾಧಿಕಾರಿ ರೋಸ್‌ಮೇರಿ, ಇನ್‌ಸ್ಪೆಕ್ಟರ್ ಸುಗುಣ ಮೊದಲಾದವರು ಭಾಗವಹಿಸಿದರು.






