ಕಾಸರಗೋಡು: ಮೊಗ್ರಾಲ್‌ಗೆ ಇದೇ ಪ್ರಥಮವಾಗಿ ತಲುಪಿದ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ವನ್ನು ಇತಿಹಾಸ ಪೂರ್ಣಗೊಳಿಸಲು ಪೂರ್ವ ವಿದ್ಯಾರ್ಥಿಗಳು ರಂಗಕ್ಕಿಳಿದಿ ದ್ದಾರೆ. ಹಲವಾರು ಕವಿಗಳಿಗೆ, ಕಲಾ ಪ್ರತಿಭೆಗಳಿಗೆ ಮೊಗ್ರಾಲ್ ಜನ್ಮ ನೀಡಿದ್ದು, ಇಶಲ್ ಗ್ರಾಮ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ತಿಂಗಳ 29, 30, 31ರಂದು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ಮೊಗ್ರಾಲ್ ಜಿವಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿದೆ. ಇದರ ಯಶಸ್ವಿಗಾಗಿ 1989-90 ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ಮೊದಲ ಹಂತದ ಸಹಾಯವಾಗಿ 55,555 ರೂ.ಗಳ ಚೆಕ್‌ನ್ನು ಪ್ರಧಾನ ಸಂಚಾಲಕರಾಗಿರುವ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ವಿ. ಮಧುಸೂದನನ್‌ರಿಗೆ ಹಸ್ತಾಂತರಿಸಿದ್ದಾರೆ. ತಂಡದ ಸದಸ್ಯರಾದ ಎನ್.ಎ. ಅಬ್ದುಲ್ ಖಾದರ್, ಬಿ.ಎ. ಮುಹಮ್ಮದ್ ಕುಂಞಿ, ಮೊಹಮ್ಮದ್, ಮುಹಮ್ಮದ್ ಕುಂಞಿ ಗೋವಾ ಎಂಬಿವರು ಸೇರಿ ಈ ಮೊತ್ತವನ್ನು ಹಸ್ತಾಂತರಿಸಿದ್ದಾರೆ.







