ಕಾಸರಗೋಡು: ಕಾಸರ ಗೋಡು ಜಿಲ್ಲಾ ಶಾಲಾ ಕಲೋತ್ಸವವನ್ನು ಮೊಗ್ರಾಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ನವೆಂಬರ್ 24ರಿಂದ 29ರ ವರೆಗೆ ಜಿಲ್ಲಾ ಶಾಲಾ ಕಲೋತ್ಸವವನ್ನು ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಶಾಲಾ ಕಲೋತ್ಸವವನ್ನು ಕುಂಡಂಕುಳಿಯಲ್ಲಿ ನಡೆಸಿದಲ್ಲಿ ಅದು ವಿವಿಧ ರೀತಿಯ ಅನಾನುಕೂಲತೆ ಉಂಟಾಗುವ ಸಾಧ್ಯತೆ ಇದೆ ಎಂದು ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧಿಕೃತರು ನಂತರ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್‌ಗೆ ತಿಳಿಸಿದ್ದರು. ಅದರಿಂದಾಗಿ ಅಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಜಿಲ್ಲಾ ಶಾಲಾ ಕಲೋತ್ಸವವನ್ನು ಮೊಗ್ರಾಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಸ್ಥಳಾಂತರಿಸುವ ತೀರ್ಮಾನಕ್ಕೆ ಜಿಲ್ಲಾ ಪಂಚಾಯತ್ ಮತ ಜಿಲ್ಲಾ ಶಿಕ್ಷಣ ಇಲಾಖೆ ಈಗ ಬಂದಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಜಿಲ್ಲಾ ಶಾಲಾ ಕಲೋತ್ಸವವನ್ನು ನಡೆಸುತ್ತಿರುವುದು ಅತೀ ವಿರಳವಾಗಿದೆ. ಅದನ್ನು ಪರಿಗಣಿಸಿ ಈ ಕಲೋತ್ಸವವನ್ನು ಮೊಗ್ರಾಲ್ ಶಾಲೆಯಲ್ಲಿ ನಡೆಸಲು ತೀರ್ಮಾನಿ ಸಲಾಗಿದೆ. ಇದರ ದಿನಾಂಕವನ್ನು ಇನ್ನಷ್ಟೇ ನಿಗದಿಪಡಿಸಲು ಬಾಕಿ ಇದೆ.
ಸ್ವಾಗತ ಸಮಿತಿ ರಚನೆ ಇಂದು
ಜಿಲ್ಲಾ ಶಾಲಾ ಕಲೋತ್ಸವದ ಯಶಸ್ವಿಗಾಗಿ ಮೊಗ್ರಾಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ಅಪರಾಹ್ನ ೨.೩೦ಕ್ಕೆ ಸ್ವಾಗತ ಸಮಿತಿಗೆ ರೂಪು ನೀಡಲಾಗುವುದು. ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿ ಸುವರು. ಜಿಲ್ಲಾ ಶಾಲಾ ಕಲೋತ್ಸವ ನಡೆಸುವ ದಿನಾಂಕವನ್ನು ಈ ಸಭೆಯಲ್ಲಿ ನಿಗದಿಪಡಿಸಲಾಗುವುದು.







