ಕಾಸರಗೋಡು: ನೀಲೇಶ್ವರದಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕ್ರೀಡಾಕೂಟದಲ್ಲಿ ಹೊಸದುರ್ಗ ಶಿಕ್ಷಣ ಉಪಜಿಲ್ಲೆ 25 ಚಿನ್ನ, 18 ಬೆಳ್ಳಿ ಹಾಗೂ 14 ಕಂಚಿನ ಪದಕಗಳ ಸಹಿತ 211 ಅಂಕ ಗಳಿಸಿ ಚಾಂಪಿಯ ನ್ಶಿಪ್ ಪಟ್ಟ ಅಲಂಕರಿಸಿದೆ. ಕಾಸರಗೋಡು ಶಿಕ್ಷಣ ಉಪಜಿಲ್ಲೆ 16 ಚಿನ್ನ, 21 ಬೆಳ್ಳಿ ಹಾಗೂ 19 ಕಂಚಿನ ಪದಕ ಪಡೆದು 169 ಅಂಕಗಳೊAದಿಗೆ ದ್ವಿತೀಯ ಸ್ಥಾನ ಪಡೆದಿದೆ.
153 ಅಂಕಗಳೊAದಿಗೆ ಚೆರುವತ್ತೂರು ಶಿಕ್ಷಣ ಉಪಜಿಲ್ಲೆಗೆ ತೃತೀಯ ಸ್ಥಾನ ಲಭಿಸಿದೆ. ಉಳಿದಂತೆ ಮಂಜೇಶ್ವರ (96 ಅಂಕ), ಕುಂಬಳೆ (66) ಮತ್ತು ಬೇಕಲ ಶಿಕ್ಷಣ ಉಪಜಿಲ್ಲೆ (60 ಅಂಕ)ಗಳೊAದಿಗೆ ನಂತರದ ಸ್ಥಾನ ಪಡೆದಿದೆ. ನಿನ್ನೆ ನಡೆದ ಸಮಾರೋಪ ಸಮಾರಂಭವನ್ನು ಕಾಸರಗೋಡು ಎಎಸ್ಪಿ ಡಾ. ಎಂ. ನಂದ ಗೋಪಾಲ್ ಉದ್ಘಾಟಿಸಿದರು. ಪರಪ್ಪ ಬ್ಲೋಕ್ ಪಂಚಾಯತ್ ಉಪಾಧ್ಯಕ್ಷ ಕೆ. ಭೂಪೇಶ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಶಾಲೆಗಳ ಪೈಕಿ ಹೊಸದುರ್ಗ ಹೈಯರ್ ಸೆಕೆಂಡರಿ ಶಾಲೆ ಅಗ್ರಸ್ಥಾನ ಪಡೆದಿದೆ.







