ನೀಲೇಶ್ವರ: ನೀಲೇಶ್ವರದಲ್ಲಿ ನಡೆದ ಜಿಲ್ಲಾ ಶಾಲಾ ಕ್ರೀಡಾಕೂಟದಲ್ಲಿ ಒಟ್ಟು 176 ಅಂಕ ಪಡೆದು ಕಾಸರಗೋಡು ಶಿಕ್ಷಣ ಉಪಜಿಲ್ಲೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಅಂದರೆ ಕಳೆದ 11 ವರ್ಷಗಳ ಬಳಿಕ ಕಾಸರಗೋಡು ಶಿಕ್ಷಣ ಉಪಜಿಲ್ಲೆ ಈ ಸಮಗ್ರ ಪ್ರಶಸ್ತಿಯನ್ನು ಮತ್ತೆ ತನ್ನದಾಗಿಸಿಕೊಂಡಿದೆ. ೧೫ ಚಿನ್ನ, 2೧ ಬೆಳ್ಳಿ ಹಾಗೂ ೨೨ ಕಂಚಿನ ಪದಕಗಳನ್ನು ಗೆದ್ದು ಈ ಸರ್ವಾಂಗೀಣ ಪಟ್ಟ ಅಲಂಕರಿಸಿದೆ.
ಹೊಸದುರ್ಗ ಶಿಕ್ಷಣ ಉಪಜಿಲ್ಲೆ ೧೯ ಚಿನ್ನ, 13 ಬೆಳ್ಳಿ ಹಾಗೂ 18 ಕಂಚಿನ ಪದಕ ಪಡೆದು 158.5 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. 16 ಚಿನ್ನ, 12 ಬೆಳ್ಳಿ, 8 ಕಂಚಿನ ಪದಕ ಪಡೆದು ೧೨೪ ಅಂಕದೊಂದಿಗೆ ಚೆರುವತ್ತೂರು ಶಿಕ್ಷಣ ಉಪಜಿಲ್ಲೆ ತೃತೀಯ ಸ್ಥಾನಕ್ಕೆ ಅರ್ಹವಾಗಿದೆ. ಉಳಿದಂತೆ ಕುಂಬಳೆ ಶಿಕ್ಷಣ ಉಪಜಿಲ್ಲೆ- 116.5೫, ಚಿತ್ತಾರಿಕಲ್-111 ಮಂಜೇಶ್ವರ-106 ಮತ್ತು ಬೇಕಲ ಶಿಕ್ಷಣ ಉಪಜಿಲ್ಲೆ- 97ಅಂಕದೊಂದಿಗೆ ಕ್ರಮವಾಗಿ ನಂತರದ ಸ್ಥಾನ ಗಿಟ್ಟಿಸಿಕೊಂಡಿದೆ.
ಶಾಲಾ ಮಟ್ಟದಲ್ಲಿ ಹೊಸದುರ್ಗ ಹೈಯರ್ ಸೆಕೆಂಡರಿ ಶಾಲೆ ನಿರಂತರವಾಗಿ 66 ಅಂಕದೊಂದಿಗೆ ಸತತ ಮೂರನೇ ಬಾರಿಯಂತೆ ಪ್ರಥಮ ಸ್ಥಾನ ಪಡೆದಿದೆ. 1೦ ಚಿನ್ನ, ತಲಾ ೪ರಂತೆ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದೆ.
ಕುಂಬಳೆ ಜಿಎಚ್ಎಸ್ 7 ಚಿನ್ನ, 5 ಬೆಳ್ಳಿ, ಒಂದು ಕಂಚು ಸೇರಿ 51 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. 7 ಚಿನ್ನ ಮತ್ತು ಎರಡು ಕಂಚಿನ ಪದಕದೊಂದಿಗೆ ಕುಟ್ಟಮತ್ ಹೈಯರ್ ಸೆಕೆಂಡರಿ ಶಾಲೆ 37 ಅಂಕದೊಂದಿಗೆ ಮೂರನೇ ಸ್ಥಾನ ಪಡೆದಿದೆ. ನಿನ್ನೆ ನಡೆದ ಸಮಾರೋಪ ಸಮಾರಂಭವನ್ನು ಶಾಸಕ ಗೋವಿಂದನ್ ಪಳ್ಳಿಕಾಪಿಲ್ ಉದ್ಘಾಟಿಸಿ ಪ್ರಶಸ್ತಿ ವಿತರಿಸಿದರು. ಚಾಯೋತ್ತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಜಿಲ್ಲಾ ಕ್ರೀಡಾ ಕೂಟದ ಆತಿಥೇಯ ವಹಿಸಿಕೊಂಡಿತ್ತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕೆ.ಕೆ. ಸೋಯಾ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಒಕ್ಲಾವ್ ಕೃಷ್ಣನ್, ಎಂ. ಮನು, ಸುಕುಮಾರಿ ಶ್ರೀಧರನ್, ಕಿನಾನೂರು ಕರಿಂದಳಂ ಪಂಚಾಯತ್ ಅಧ್ಯಕ್ಷ ಎಂ. ರಾಜನ್, ಜಿಲ್ಲಾ ಪಂಚಾಯತ್ ಸದಸ್ಯೆ ರೀನಾ ಥೋಮಸ್, ಸಂಘಟಕ ಸಮಿತಿ ಸಂಚಾಲಕಿ ಕೆ.ಟಿ. ಸೀಮಾ, ಜಿಲ್ಲಾ ಸ್ಕೂಲ್ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಅಸೋಸಿಯೇಶನ್ನ ಕಾರ್ಯದರ್ಶಿ ಕೆ.ವಿ. ಬಿಜು ಮೊದಲಾದವರು ಮಾತನಾಡಿದರು.






